ರಾಮನಗರ : ಸರ್ಕಾರ ಬೀಳಿಸಬೇಕೆನ್ನುವ ಹೆಚ್ ಡಿ ಕುಮಾರಸ್ವಾಮಿ ಕನಸು ನನಸಾಗಲ್ಲ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ಈ ಸಂಬಂಧ ರಾಮನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ (JDS) ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೂಡಿ ಸರ್ಕಾರ ಬೀಳಿಸಲು ಏನೋ ಮಾಡುತ್ತಿದ್ದಾರೆ ಅನಿಸುತ್ತಿದೆ. ಅದಕ್ಕಾಗಿಯೇ ಅವರು ಸಿಂಗಪುರಕ್ಕೆ ಹೋಗಿ ಕುಳಿತಿದ್ದಾರೆ. ಅವರ ಕನಸು ಕೈಗೂಡುವುದಿಲ್ಲ.
ಸರ್ಕಾರ ಬೀಳುವುದೂ ಇಲ್ಲ’ ಎಂದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಉರುಳಿಸಲು ಕಾಂಗ್ರೆಸ್‌ನ 40 ಶಾಸಕರನ್ನು ಕರೆದುಕೊಂಡು ಹೋಗುವ ಕನಸು ನಿಜವಾಗಲು ಸಾಧ್ಯವೇ? ಅಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆ ಮಾಡುತ್ತಿರುತ್ತಾರೆಯೇ’ ಎಂದರು.
ಸಿದ್ದರಾಮಯ್ಯ ಅವರು ಹಿಂದಿನವರಂತೆ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಕುಳಿತಿಲ್ಲ. ಬದಲಿಗೆ, ಎಲ್ಲ ಶಾಸಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಕೇಳುತ್ತಿದ್ದಾರೆ. ಏನಾದರೂ ತೊಂದರೆಯಾದರೆ ಟ್ರಬಲ್ ಶೂಟರ್ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದ್ದಾರೆ. ಎಲ್ಲರ ಅಹವಾಲುಗಳನ್ನು ಆಲಿಸುತ್ತಾರೆ’ ಎಂದು ತಿಳಿಸಿದರು.