ಬೆಂಗಳೂರು : ಹೈವೇ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಸಂಚಾರ ಮತ್ತು ಸುರಕ್ಷತಾ ಪ್ರಾಧಿಕಾರ ಎಡಿಜಿಪಿ ಅಲೋಕ್ ಕುಮಾರ್ ಬೆಂಗಳೂರು-ಪುಣೆ ನ್ಯಾಷನಲ್ ಹೈವೆ ರಸ್ತೆ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ರಾಜ್ಯದ ಹೈವೇ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೈಸೂರು ದಶಪಥ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತ ವಿಚಾರಗಳು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಿತ್ತು. ಇತ್ತೀಚೆಗೆ ಮೈಸೂರು ದಶಪಥ ರಸ್ತೆ ಪರಿಶೀಲನೆ ಮಾಡಿ ಕ್ರಮ ಕೈಗೊಂಡಿದ್ದಾರೆ. ಈಗ ಬೇರೆ ಬೇರೆ ಹೈವೇ ರಸ್ತೆಗಳಾದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಫ್ಲೈ ಓವರ್‌ಗಳ, ಹೈವೇ ಪರಿಶೀಲನೆ ನಡೆಸಿ ಅಲೋಕ್ ಕುಮಾರ್‌ಗೆ ಐಜಿಪಿ ರವಿಕಾಂತೇಗೌಡ, ಎಸ್ ಪಿ ಮಲ್ಲಿಕಾರ್ಜುನ್ ಬಾಲ್ದಂಡಿ ನೀಡಿದ್ದಾರೆ.
ಬಳಿಕ ಸಂಚಾರ ಮತ್ತು ಸುರಕ್ಷತಾ ಪ್ರಾಧಿಕಾರ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಇತ್ತೀಚೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚು ಅಪಘಾತ ಆಗುತ್ತಿದೆ. ಕಳೆದ ತಿಂಗಳಲ್ಲಿ 49 ಅಪಘಾತಗಳು ಸಂಭವಿಸಿವೆ. ರಾಜ್ಯದಲ್ಲಿ ಎರಡನೇ ಸ್ಥಾನ ಬಂದಿದೆ. ಹೀಗಾಗಿ ಇಷ್ಟು ಅಪಘಾತಕ್ಕೆ ಏನು ಕಾರಣ ಅಂತಾ ಪರಿಶೀಲನೆ ಮಾಡೋಕೆ ಬಂದೆ. ನೆಲಮಂಗಲ – ತುಮಕೂರು ಮಧ್ಯೆ ಸಾಕಷ್ಟು ಅಪಘಾತಗಳು ಆಗ್ತಿವೆ. ಹೈ ರೆಸ್ಯೂಲೇಷನ್ ಕ್ಯಾಮೆರಾಗಳು ಅಳವಡಿಸಲಾಗಿದೆ.
ಅವು ಹೇಗೆ ಕಾರ್ಯ ನಿರ್ವಹಿಸಲಾಗುತ್ತೆ ಅಂತಾ ಪರಿಶೀಲನೆ ನಡೆಸ್ತೀನಿ. ಜೊತೆಗೆ ಒಂದಷ್ಟು ಸಮಸ್ಯೆಗಳಿವೆ, ಅದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲಲ್ಲಿ ರ್ಯಾಂಪ್ ಗಳನ್ನ ಅಳವಡಿಸೋಕೆ ಸೂಚನೆ ನೀಡಿದ್ದೇನೆ. ಫ್ಲೈ ಓವರ್ ಅಕ್ಕ-ಪಕ್ಕ ಒಂದಷ್ಟು ಸಮಸ್ಯೆಗಳಿವೆ. ಅದ್ರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಟೋಲ್‌ಗಳ ಬಳಿ ಏನು ಸಮಸ್ಯೆ ಆಗ್ತಿದೆ ಅದ್ರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.