ಬೆಂಗಳೂರು : ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಧರ್ಮಪತ್ನಿ ಸ್ಪಂದನಾ ಹೃದಯಾಘಾತಗೊಂಡು ಸಾವನ್ನಪ್ಪಿದ್ದ ಸ್ಪಂದನ ಇಲ್ಲದೇ ವಿಜಯರಾಘವೇಂದ್ರ ಹೇಗೆ ಬದುಕುತ್ತಾನೆ ಎಂದು ಹಿರಿಯ ನಟಿ ಜಯಮಾಲಾ (Veteran actress Jayamala)ಬೇಸರ ಪಟ್ಟಿದ್ದಾರೆ.
ಮಾಧ್ಯಮದೊಂದಿಗೆ ಹಿರಿಯ ನಟಿ ಜಯಮಾಲ ಮಾತನಾಡಿ, ಸ್ಪಂದನ, ರಾಘು ಇಬ್ಬರು ನಮ್ಮ ಕುಟುಂಬದವರು, ಇವರನ್ನು ನೋಡಿದಾಗಲೆಲ್ಲಾ ಆದರ್ಶ ದಂಪತಿಗಳೆಂದು ಕೊಳ್ಳುತ್ತಿದ್ದೆ, ಅಷ್ಟು ಅನ್ಯೋನ್ಯವಾಗಿದ್ದರು. ಸ್ಪಂದನ ಇಲ್ಲದೇ ವಿಜಯ ರಾಘವೇಂದ್ರ ಹೇಗೆ ಬದುಕುತ್ತಾನೆ. ಎಷ್ಟು ಹಣ ಇದ್ದರೇನು ಪ್ರಯೋಜನ ಅವರನ್ನ ಉಳಿಸಿಕೊಳ್ಳಲು ಆಗಲಿಲ್ಲ. ದೇವರು ಎರಡು ಕುಟುಂಬಕ್ಕೂ ನೋವು ಭರಿಸುವ ಶಕ್ತಿ ನೀಡಲಿ ಎಂದು ಹಿರಿಯ ನಟಿ ಜಯಮಾಲಾ ಭಾವುಕರಾಗಿದ್ದಾರೆ.