ಬೆಂಗಳೂರು : ನಗರದ ಯಶವಂತಪುರದಿಂದ ಟಾಟಾ ಇನ್ಸ್ಟಿಟ್ಯೂಟ್ ಮಾರ್ಗವಾಗಿ ಮತ್ತಿಕೆರೆಗೆ ತೆರಳುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಬಿ.ಎಲ್‌ನಿಂದ ಮತ್ತಿಕೆರೆಗೆ ಮಾರ್ಗವಾಗಿ ಯಶವಂಪುರಕ್ಕೆ ಬರುವ ಬಸ್‌ಗಳ ಮಾರ್ಗ ಬದಲಾವಣೆಯಾಗಿದ್ದು, ಕಳೆದ ಒಂದು ಗಂಟೆಯಿಂದ ಬಸ್ಸ್‌ಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕಳೆದ ಒಂದು ಗಂಟೆಯಿಂದ ಆಫೀಸ್‌ಗೆ ಹೋಗುವ ಜನರ ಪರದಾಟವಂತಾಗಿದೆ. ಮಾಹಿತಿ ಇಲ್ಲದೆ ಕಳೆದ ಒಂದು ಗಂಟೆಯಿಂದ ಬಸ್ ನಿಲ್ದಾಣಗಳಲ್ಲಿ ನಿಂತು ಕಾದು ಕಾದು ಜನರು ಸುಸ್ತಾಗಿದ್ದಾರೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಮರ ತೆರವು ಕಾರ್ಯಚರಣೆ ಮಾಡುತ್ತಿದ್ದಾರೆ.