ಬೆಂಗಳೂರು : ಹುಬ್ಬಳ್ಳಿಯಲ್ಲಿ ರಾಮಭಕ್ತ ಕರಸೇವಕರ ಬಂಧನ ಖಂಡಿಸಿ, ಮಲ್ಲೇಶ್ವರಂನ ಪೊಲೀಸ್ ಠಾಣೆ ಮುಂದೆ ಮಾಜಿ ಸಚಿವ ಸುರೇಶ್ ಕುಮಾರ್ ಧರಣಿಗೆ ಮಂದಾಗಿದ್ದಾರೆ.
ಮಲ್ಲೇಶ್ವರಂನ ಪೊಲೀಸ್ ಠಾಣೆ ಮುಂದೆ “ನಾನು ಕರಸೇವಕ ನನ್ನನು ಬಂಧಿಸಿ ” ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಧರಣಿ ನಡೆಸುತ್ತಿದ್ದಾರೆ. ಶ್ರೀಕಾಂತ್ ಪೂಜಾರಿಯನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಕರ ಸೇವಕರನ್ನು ಬಂಧಿಸುತ್ತಿರುವ ಅಯೋಗ್ಯ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.