ಬೆಂಗಳುರು : ಇದೇ ಮೊದಲ ಬಾರಿಗೆ ರಾಜ್ಯದ ಪೊಲೀಸರು ಬ್ರೈನ್ಮ್ಯಾಪಿಂಗ್ನ ನ ಮೂಲಕ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ವಾಸವಾಗಿದ್ದ ಹೊನ್ನಚಾರಿ ಎಂಬುವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಉತ್ತರ ಕರ್ನಾಟಕದ ಮೂಲದ ಅನ್ನು ಸಿಕ್ಕಿಬಿದ್ದ ಆರೋಪಿ ಎಂದು ಗುರುತಿಸಲಾಗಿದೆ.
ಹೊನ್ನಾಚಾರಿ ಮನೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಸುಮಾರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ವಾಗಿರುತ್ತೆ ಇದಕ್ಕೆ ಸಂಬಂಧ ಪಟ್ಟಂತೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರನ್ನ ಕೊಡುತ್ತಾರೆ ತನಿಖೆ ಕೈಗೊಂಡ ಪೊಲೀಸರಿಗೆ ಯಾವುದೇ ಸುಳಿವು ಸಿಗುವುದಿಲ್ಲ, ಹಾಗೂ ಇದೇ ಅನ್ನಪೂರ್ಣ ಳನ್ನ ತನಿಖೆ ಮಾಡಿದ್ರು. ಯಾವುದೇ ಯೂಸ್ ಆಗೋದಿಲ್ಲ ತಾನೂ ಕಳ್ಳತನ ಮಾಡಿಲ್ಲ ಎಂದು ಹೇಳಿದ್ದಳು.
ಇನ್ನೂ ಪೊಲೀಸರಿಗೂ ಸಾಕಷ್ಟು ತಲೆನೊವಾಗಿದ್ದ ಕೇಸ್ ಇದಾಗಿತ್ತು. ನಂತರ ಕೋರ್ಟ್ ಅನುಮತಿ ಪಡೆದು ಪಾಲಿಗ್ರಾಮ್ ಟೆಸ್ಟ್ ಮಾಡಿಸಿದ್ರು ಆಗ್ಲೂ ಕೂಡ ಆರೋಪಿ ಯಾವುದೇ ಸುಳಿವು ಬಿಟ್ಟು ಕೊಡಲಿಲ್ಲ. ನಂತರ ಮತ್ತೆ ಕೊರ್ಟ್ ನಲ್ಲಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸುವುದಕ್ಕೆ ಅನುಮತಿ ಪಡೆದು ಬ್ರೈನ್ ಮ್ಯಾಪಿಂಗ್ ಮಾಡಿದಾಗ ಮಾಮಾ ಎನ್ನುವ ಪದವನ್ನು ಹೇಳಿದ್ದಳು ಇದರ ಬೆನ್ನು ಹತ್ತಿದ ಪೊಲೀಸರು ಗದಗನಲ್ಲಿರುವ ಅನ್ನಪೂರ್ಣ ಳ ಮಾವನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಟ್ಟ ಚಿನ್ನವನ್ನು ವಾಪಸ್ ಕೊಟ್ಟ ಹಾಗೇ ಇನ್ನುಳಿದ ಚಿನ್ನ ವನ್ನು ಅವರ ಸಂಬಂಧಿಕರಿಗೆ ಕೊಟ್ಟಿದ್ಲು. ಒಟ್ಟಿನಲ್ಲಿ ಒಂದೂವರೆ ವರ್ಷದ ಕಳ್ಳತನ ಪ್ರಕರಣವನ್ನು ಬೇದಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ವರದಿ :ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್.