ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೂಗಳ ಹಬ್ಬ ಲಾಲ್ ಬಾಗ್ ಫವರ್ ಶೋಗೆ ದಿನಾಂಕ ನಿಗದಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇದೇ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಲಿದೆ. ಸ್ವಾತಂತ್ರೋತ್ಸವದ ಅಂಗವಾಗಿ ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ಇರಲಿದ್ದು ವಿಧಾನ ಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಕಾನ್ಸೆಪ್ಟ್ ಇರಲಿದೆ.
ಇನ್ನು 15 ರಿಂದ 17 ಲಕ್ಷ ಹೂ ಬಳಕೆ ಸಾಧ್ಯತೆಯಿದೆ. ಫ್ಲವರ್ ಶೋಗೆ ಕೊಲ್ಕತ್ತಾ, ಕೇರಳ, ತಮಿಳುನಾಡು, ಆಂಧ್ರದ ಹೂಗಳ ಬಳಕೆಯಾಗಲಿದೆ. 10 ರಿಂದ 12 ಲಕ್ಷ ಜನ ಬರುವ ಸಾಧ್ಯತೆಯಿದ್ದು, ಒಟ್ಟು 10 ದಿನಗಳ ಕಾಲ ಪ್ಲವರ್ ಶೋ ನಡೆಯಲಿದೆ ಎಂದು ಲಾಲ್ ಬಾಗ್ ನಿರ್ದೇಶಕ ರಮೇಶ್ ಮಾಹಿತಿ ನೀಡಿದ್ದಾರೆ.
ಮೆಟ್ರೋ ಗೇಟ್ ಬಳಿ ಪ್ರೇಕ್ಷಕರಿಗೆ ಎಂಟ್ರಿಕೊಡಲಾಗಿದ್ದು, ಒಟ್ಟು ನಾಲ್ಕೂ ಗೇಟ್ಗಳಲ್ಲಿ ಜನರಿಗೆ ಎಂಟ್ರಿ ಕೊಟ್ಟಿದ್ದೇವೆ. ಫ್ಲವರ್ ಶೋಗೆ ಎರಡೂವರೆ ಕೋಟಿಯಷ್ಟು ಹಣವನ್ನ ವ್ಯಯ ಮಾಡಲಾಗುತ್ತಿದೆ. ಈ ಬಾರಿ ಟಿಕೆಟ್ ದರ ಏನೂ ಜಾಸ್ತಿ ಮಾಡಿಲ್ಲ.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ವಿಕ್ ಡೇಸ್ ನಲ್ಲಿ ಹಿರಿಯರಿಗೆ 70 ರೂಪಾಯಿ, ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಟ್ರಾಫಿಕ್ ಸಮಸ್ಯೆಯಾಗದಂತೆ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, 200 ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದೆ. ಆಂಬುಲೆನ್ಸ್ ಹಾಗೂ ಮಹಿಳೆಯರಿಗೆಂದೇ ವಿಶೇಷ ಶಿಬಿರ ವ್ಯವಸ್ಥೆ ಮಾಡಲಾಗುತ್ತಿದೆ.