ಬೆಂಗಳೂರು : ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಗೆ ತಯಾರಾಗಬೇಕು, ಜನರ ಮೆಚ್ಚುಗೆ ಗಳಿಸಬೇಕು ಅನ್ನೋ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಆಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ದಿನೇಶ್ ಗುಂಡೂರಾವ್ ಮಾತನಾಡಿ, ದೆಹಲಿಯಲ್ಲಿ ಒಳ್ಳೆಯ ಸಭೆ ನಡೀತು, ಅಧ್ಯಕ್ಷರು, ರಾಹುಲ್ ಗಾಂಧಿ ಜೊತೆ. ಜವಾಬ್ದಾರಿಗಳ ನಿರ್ವಹಣೆ ಆಗಬೇಕು. ಜನ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.
ವರಿಷ್ಠರ ಜೊತೆ ಮೀಟಿಂಗ್ ವಿಚಾರವಾಗಿ ಮಾತನಾಡಿ ಲೋಕಸಭೆ ಎಲೆಕ್ಷನ್ ಗೆ ತಯಾರಾಗಬೇಕು.ಜನರ ಮೆಚ್ವುಗೆ ಗಳಿಸಬೇಕು ಅನ್ನೋ ಬಗ್ಗೆ ಚರ್ಚೆ ಆಗಿದೆ. ಗ್ಯಾರಂಟಿಗಳ ಪ್ರಚಾರದ ಬಗ್ಗೆ,ಎಷ್ಟೇ ಒತ್ತಡ ಇದ್ರೂ ಕಾರ್ಯಗತ ಆಗಬೇಕು. ಜಿಲ್ಲಾ ಉಸ್ತುವಾರಿಗಳು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು. ಜಿಲ್ಲಾ, ತಾಲೂಕು, ಮಹಾನಗರ, ಪಂಚಾಯ್ತಿ, ಎಲೆಕ್ಷನ್ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.
ಇನ್ನೂ ವರ್ಗಾವಣೆ, ಶಾಸಕರ ಅಸಮಧಾನ ವಿಚಾರವಾಗಿ ಪ್ರತಿಕ್ರಿಯಿಸಿ ವರ್ಗಾವಣೆ ಆಗ್ತಿದೆ, ಪ್ರಕ್ರಿಯೆ ನಡೀತಾ ಇದೆ. ಶಾಸಕರ ಅಸಮಧಾನ ಅಂತಾ ಏನೂ ಚರ್ಚೆ ಆಗಿಲ್ಲ.ಪಕ್ಷದ ಪುನರ್ ಸಂಘಟನೆ ಅಜೆಂಡಾ ಇದ್ದೇ ಇರುತ್ತೆ. ಮಂತ್ರಿಮಂಡಲದಲ್ಲಿ ದೊಡ್ಡೋರು,ಚಿಕ್ಕೋರು ಇರ್ತಾರೆ.ಸಾಮಾಜಿಕ ನ್ಯಾಯ ಇರಬೇಕು.ಕೆಲವು ಕಡೆ ಕೆಎಟಿ ಹೋಗೋದು ಆಗಬಹುದು. ಅನ್ಯಾಯ ಆಗಿದ್ರೆ ಅಧಿಕಾರಿಗಳು ಕೆಎಟಿಗೆ ಹೋಗ್ತಾರೆ. ಕೆಎಟಿ ಇರೋದೇ ಅದಕ್ಕೆ ಅಲ್ವಾ ಎಂದರು.
ಇನ್ನೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಮಾತನಾಡಿ ಪಕ್ಷದ ಹಿತದೃಷ್ಟಿಯಿಂದ ಅದು ಆಗಬೇಕು.ಈಗಾಗಲೇ ಕಾರ್ಯಧ್ಯಕ್ಷರು ಆಗಿರುವವರು ಸಚಿವರಾಗಿದ್ದಾರೆ.ಈ ಹಿನ್ನಲೆ ಅವುಗಳನ್ನ ಬದಲಾವಣೆ ಮಾಡಬೇಕು,ಬೇರೆ ಅವರಿಗೂ ಅವಕಾಶ ಕೊಡಬೇಕು ಎಂದು ಚರ್ಚೆ ಆಗಿದೆ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ