ಬೆಂಗಳೂರು : ಲೋಕಾಯುಕ್ತದಿಂದ ಆರ್.ಐ. ನಟರಾಜ್ ಟ್ರ್ಯಾಪ್ ಪ್ರಕರಣ ಸಂಬಂಧಿಸಿ ಲೋಕಾ ಅಧಿಕಾರಿಗಳಿಂದ ಪರಿಶೀಲನೆ ವೇಳೆ 900 ಗ್ರಾಂ ಚಿನ್ನ,7 ಕೆಜಿ ಬೆಳ್ಳಿ, 80 ಸಾವಿರ ನಗದು ಪತ್ತೆಯಾಗಿದೆ.
ನಟರಾಜ್ ಅವರು ಇನ್ನೋವಾ ಕ್ರಿಸ್ಟಾ, ಕಿಯಾ ಸೋನೆಟ್, ಹುಂಡೈ ವರ್ಣಾ, ಆಡಿ ಕ್ಯೂಆರ್ ಸೇರಿ ನಾಲ್ಕು ಕಾರುಗಳು ಹೊಂದಿದ್ದಾರೆ.
ಆವಲಳ್ಳಿ ಗಿರಿನಗರದಲ್ಲಿ ಐಷಾರಾಮಿ ಮನೆ, ಕೊಡಿಗೇಹಳ್ಳಿಯಲ್ಲಿ ನಟರಾಜ್ ಪತ್ನಿ ಹೆಸರಲ್ಲಿ ಸೈಟ್ ಇರುವುದು ಪತ್ತೆಯಾಗಿದೆ. ಸದ್ಯ ನಟರಾಜ್ ಮನೆಯಲ್ಲಿ ಮುಂದುವರೆದ ಲೋಕಾ ಅಧಿಕಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ.