ಕೋಲಾರ : ಕದ್ದ ಕೋಳಿ ಖರೀದಿಸಿದ್ದನ್ನು ಪ್ರಶ್ನಿಸಿದವನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಕೋಲಾರದ ಅಮ್ಮಾವರಪೇಟೆ ವೃತ್ತದಲ್ಲಿ ಬಳಿ ನಡೆದಿದೆ.
ಕದ್ದ ಕೋಳಿಗಳನ್ನು ಖರೀದಿ ಮಾಡುತ್ತಾನೆ ಎಂದು ಪ್ರಶ್ನಿಸಿ ಖಾಸಗಿ ವಾಹಿನಿಯ ಕ್ಯಾಮೆರಾ ಮಾನ್ ಕಿರಣ್ ಎಂಬಾತ ಮಾಂಸದಂಗಡಿಗೆ ಬಂದು ವಿಡಿಯೋ ಮಾಡೋದಕ್ಕೆ ಮುಂದಾಗುತ್ತಾನೆ.
ಇದಕ್ಕೆ ಸಿಟ್ಟುಕೊಂಡ ಕೋಳಿ ಮಾಂಸದ ಅಂಗಡಿ ಮಾಲೀಕ ಕೋಳಿ ಕತ್ತರಿಸುವ ಮಚ್ಚಿನಿಂದಲೇ ಎರಡು ಬಾರಿ ಬೀಸಿ ಕಿರಣ್ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಖಾಸಗಿ ಕ್ಯಾಮರಾ ಮೆನ್ ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾನೆ. ಅವನನ್ನು ತಡೆದು ಪೊಲೀಸರ ಕೈಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧಿಸಿ ಗಲ್ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.