ಆನೇಕಲ್: ಬಂಡೆ ಮೇಲಿಂದ ಬಿದ್ದು ವ್ಯಕ್ತಿಯೋರ್ವ ವಾರದ ಹಿಂದೆ ಸಾವನ್ನಪ್ಪಿದ್ದು ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದ್ದಾನೆ.
ಬನ್ನೇರುಘಟ್ಟ ರಂಗಸ್ವಾಮಿ ಕಲ್ಯಾಣ ಮಂಟಪದ ಹಿಂಬದಿಯ ಬಂಡೆ ಮೇಲೆ ಶವ ಪತ್ತೆಯಾಗಿದೆ. ಗುರುತು ಪತ್ತೆಯಾಗದ ಸ್ಥಿತಿಯಲ್ಲಿ ಗಂಡಸಿನ ಶವ ಇದಾಗಿದ್ದು ಎರೆಡೂ ಕಾಲುಗಳನ್ನು ನಾಯಿಗಳು ಕಿತ್ತು ತಿಂದಿದ್ದು ಎರೆಡೂ ಕಾಲುಗಳು ನಾಪತ್ತೆಯಾಗಿವೆ.
ಬಿಸಿಲಿನ ಬೇಗೆಗೆ ದೇಹ ಒಣಗಿದ್ದು ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಂಡೆ ಮೇಲಿಂದ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಗುರತು ಪತ್ತೆ ಕಾರ್ಯವನ್ನು ಬನ್ನೇರುಘಟ್ಟ ಪೊಲೀಸರು ಸುತ್ತಲ ಗ್ರಾಮಸ್ಥರಿಗೆ ಪ್ರಕಟಣೆ ಹೊರಡಿಸಲಿದ್ದಾರೆ.
ಸ್ಥಳಕ್ಕೆ ಎಫ್ಎಸ್ಎಲ್ ತಂಡ ಬಂದಿದ್ದು ಕೊಲೆಯಾಗಿರುವಂತಹ ಸುಳಿವು ಸಿಗದಿರುವ ಕಾರಣಕ್ಕೆ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.