ಬೆಂಗಳೂರು : ಬೆಂಗಳೂರಲ್ಲಿ ಪತಿಯಿಂದಲೇ ಪತ್ನಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆಗೈದ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪತ್ನಿ ಸರಿತಾ (35) ಕೊಲೆ ಮಾಡಿದ ಪತಿ ತಾರಾನಾಥ್. ಇವರು ಮೂಲತಃ ಮಂಗಳೂರಿನವರಾಗಿದ್ದು, ಬೆಂಗಳೂರಿನಲ್ಲಿ ಪಾನೀಪುರಿ ಅಂಗಡಿ ನಡೆಸುತ್ತಿದ್ದರು. ತಾರಾನಾಥ್, ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಶರಣಾಗಬೇಕೆಂದಿದ್ದನು. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಸಾಲದೇ ಪತಿ ತಾರಾನಾಥ್ ಪೊಲೀಸರಿಗೆ ಶರಣಾದನು. ಪತ್ನಿಯ ಮೇಲೆ ಈ ಹಿಂದೆ ಮಂಗಳೂರಿನಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಪತ್ನಿಯನ್ನು ಜನ ಕಳ್ಳಿ ಕಳ್ಳಿ ಅನ್ನೋದು ಸಹಿಸದೇ ಕೃತ್ಯವೆಸಗಿದ್ದಾನೆ ಆರೋಪ ಕೇಳಿ ಬಂದಿದೆ. ಸದ್ಯ ವೈಟ್ ಫೀಲ್ಡ್ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.