ಬೆಂಗಳೂರು : ಹೆಂಡತಿಗೆ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಇದೆ ಎಂದು ಹೆಂಡತಿಯನ್ನ ಕೊಲೆ ಮಾಡಿರುವ ಘಟನೆ ಚಂದ್ರಲೇಔಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ ತಡರಾತ್ರಿ ನಡೆದಿದೆ.
ಕಳೆದ ಹದಿಮೂರು ವರ್ಷಗಳ ಹಿಂದೆ ಹೊಸೂರು ಮೂಲದ ಗೀತಾ ಎಂಬುವರನ್ನ ಮದುವಯಾಗಿದ್ದ ಶಂಕರ್ .ಇವರ ದಾಂಪತ್ಯ ಜೀವನಕ್ಕೆ ಸಾಕ್ಷಿಯೆಂಬಂತೆ ಎರಡು ಮುದ್ದಾದ ಮಕ್ಕಳಿದ್ದರು.
ಆದರೆ ಯಾಕೋ ಇತ್ತೀಚಿಗೆ ಪತ್ನಿ ಗೀತಾಳ ವರ್ತನೆ ಯಲ್ಲಿ ಬಹಳಷ್ಟು ಬದಲಾವಣೆ ಕಂಡು ಸಾಕಷ್ಟು ಬಾರಿ ಬುದ್ದಿ ಮಾತನ್ನು ಹೇಳಿದ್ದನಂತೆ. ಆದ್ರೆ ಕಳೆದ ಹದಿನೈದು ದಿನಗಳಿಂದಲೂ ಇದೇ ವಿಚಾರವಾಗಿ ದಂಪತಿಗಳು ಜಗಳವಾಡುತ್ತಿದ್ದರು. ಆದರೆ ನಿನ್ನೆ ರಾತ್ರಿ ಗೀತಾಳ ತಂದೆಗೆ ಕರೆ ಮಾಡಿದ್ದ ಶಂಕರ್ ಆಕೆಯನ್ನ ಹತ್ಯೆಗೈದಿರುವುದಾಗಿ ತಿಳಿಸಿ ಕಾಲ್ ಕಟ್ ಮಾಡಿದ್ದಾನೆ. ಗೀತಾಳ ತಂದೆ ಹೊಸೂರಿನಿಂದ ಮಗಳ ಮನೆಗೆ ಬಂದು ನೋಡಿದಾಗ ಆಕೆ ಹತ್ಯೆಯಾಗಿರುವುದು ತಿಳಿದು ಬಂದಿದೆ.
ಪತ್ನಿಗೆ ಬೇರೆ ಸಂಬಂಧವಿದೆ ಎಂದು ಬೇಸತ್ತಿದ್ದ ಶಂಕರ್, ಹತ್ಯೆಯ ಬಳಿಕ ತನ್ನ ಬಳಿ ಆಕೆಯ ಅಕ್ರಮ ಸಂಬಂಧದ ವೀಡಿಯೋಗಳಿವೆ.ತಾನು ಪೊಲೀಸರ ಮುಂದೆ ಶರಣಾಗುತ್ತಿದ್ದೇನೆ.ಮಕ್ಕಳನ್ನ ನೀವು ನೋಡಿಕೊಳ್ಳಬೇಕು ಎಂದು ತಮ್ಮ ಬಳಿ ಹೇಳಿ ತೆರಳಿದ್ದಾನೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿರುವ ಚಂದ್ರಾಲೇಔಟ್ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ನಿನ್ನೆ ಇಡೀ ದಿನ ಕೂಡ ಮೃತ ಗೀತಾಳ ಮನೆಯಲ್ಲೇ ಇದ್ದ ಸಂಜೆ ವಾಪಸ್ ಹೊಸೂರಿಗೆ ಹೋಗಿದ್ದಾರೆ. ಆಗಲಾದ್ರು ನನಗರ ಒಂದು ವಿಷಯ ತಿಳಿಸಿಬಹುದಿತ್ತು ಎಂದು ಅಳಲು ತೊಂಡಿಕೊಂಡಿದ್ದಾರೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್