ಬೆಂಗಳೂರು : ಗಾಂಧಿಭವನ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ಮನೆಯಲ್ಲಿ ಬೆಳ್ಳಂಬೆಳಗ್ಗೆ ಕಾರುಗಳನ್ನು ಪಾರ್ಕಿಂಗ್ ಮಾಡಿದ್ದಕ್ಕೆ ಮತ್ತೆ ವ್ಯಕ್ತಿಯೊಬ್ಬ ಕಿರಿಕ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಸಿಎಂ ನಿವಾಸದ ಎದುರು ಕಾರು ಪಾರ್ಕ್ ಮಾಡಿದಕ್ಕೆ ವ್ಯಕ್ತಿಯೊಬ್ಬ ಕಿರಿಕ್ ಮಾಡಿದ್ದಾನೆ. ಪೊಲೀಸ್ ಮೇಲೆ ಗರಂ ಆಗಿ ಸಿಎಂ ಸಿದ್ದರಾಮಯ್ಯಗೆ ದೂರು ಕೊಡಲು ವ್ಯಕ್ತಿ ಮುಂದಾಗಿದ್ದಾರೆ. ಈ ವೇಳೆ ಸಿಎಂ ಮನೆಯಿಂದ ಪೊಲೀಸರು ಹೊರಗೆ ಓಡಿ ಬಂದಿದ್ದಾರೆ. ಬಳಿಕ ವ್ಯಕ್ತಿಯನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ. ಈ ಹಿಂದೆ ಒಂದು ಬಾರಿ ಸಿಎಂ ಕಾರನ್ನು ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಿಎಂ ನಿವಾಸದ ಎದುರಿನ ಮನೆಯ ವ್ಯಕ್ತಿಯ ಕಿರಿಕ್‌ಗೆ ಪೊಲೀಸರು ಸುಸ್ತಾಗಿದ್ದಾರೆ.