ಬೆಂಗಳೂರು: ಕರಾವಳಿ ತೀರ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಯಾಂತ್ರೀಕೃತ ಬೋಟ್‌ಗಳು ಮತ್ತೆ ಸಮುದ್ರಕ್ಕೆ ಇಳಿಯಲಿದ್ದು, ಇಂದಿನಿಂದ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗಲಿದೆ.
ಮಳೆಗಾಲದ ಆರಂಭದ ಎರಡು ತಿಂಗಳ ಅವಧಿಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯ ಅದ್ದರಿಂದ ಪಶ್ಚಿಮ ಕರಾವಳಿಯಲ್ಲಿ ಜೂನ್ 1 ರಿಂದ ಜುಲೈ 31 ವರೆಗೆ ಎರಡು ತಿಂಗಳ ಕಾಲ ಯಾಂತ್ರಿಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಯಾಂತ್ರಿಕೃತ ಮೀನುಗಾರಿಕೆಗೆ ವಿಧಿಸಿದ್ದ ನಿಷೇಧ ಸೋಮವಾರ (ಜು.31) ರಂದು ಕೊನೆಗೊಳ್ಳಲಿದ್ದು ಇಂದಿನಿಂದಲೇ ಮತ್ತೆ ಯಾಂತ್ರಿಕೃತ ಮೀನುಗಾರಿಕೆಗೆ ಆರಂಭವಾಗಲಿದೆ ಎನ್ನಲಾಗಿದೆ.
ಯಾಂತ್ರಿಕೃತ ಮೀನುಗಾರಿಕೆಗೆ ಆರಂಭಕ್ಕೂ ಮುನ್ನವೇ ಮೀನುಗಾರರು ಬೋಟ್‌ಗಳನ್ನು ಸ್ವಚ್ಛಗೊಳಿಸಿ, ಮೀನುಗಾರಿಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಸಜ್ಜುಗೊಳಿಸಲಾಗಿದೆ . ಇಂದು ಬೆಳಿಗ್ಗೆ ಬೋಟ್‌ಗಳಿಗೆ ಪೂಜೆ ಸಲ್ಲಿಸಿ, ಸಮುದ್ರ ಹಾಗೂ ಗಂಗಾದೇವಿಗೆ ಬಾಗಿನ ಅರ್ಪಿಸಿ ಮೀನುಗಾರಿಗೆ ಶುರುಮಾಡಲಾಗಿದೆ ಈ ನಡುವೆ ಯಾಂತ್ರಿಕೃತ ಮೀನುಗಾರಿಕೆಗೆ ನಿಷೇಧ ಸಿಟ್ಟಿಗೆದ್ದ ಮೀನುಗಾರರಿಗೆ ಮತ್ತೆ ಅವಕಾಶ ನೀಡಿದಕ್ಕೆ ಸಂತಸಗೊಂಡಿದ್ದಾರೆ ಈ ನಡುವೆ ಸಬ್ಸಿಡಿ ಡೀಸಿಲ್, ಸೀಮೆ ಎಣ್ಣೆ ಹಾಗೂ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.