ಬೆಂಗಳೂರು : ಮಾಜಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.ಈ ಕುರಿತು ರಾಜ್ಯ ಪಾಲರಿಗೆ ದೂರು ಬಂದು ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ಹೊರಡಿಸಿದ ಪತ್ರ ವೈರಲ್ ಆಗುತ್ತಿದೆ.
ರಾಜ್ಯ ಪಾಲರಿಂದ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಗೆ ಬರೆದ ಪತ್ರದಲ್ಲಿ ಏನಿದೆ ಎಂದು ನೋಡೊದಾದ್ರೆ.. ಮಂಡ್ಯ ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ರಾಜ್ಯ ಪಾಲರಿಗೆ ದೂರಿನ ಪತ್ರ ಬರೆದಿದ್ದು ಅದರಲ್ಲಿ ಸಚಿವರು ಅಧಿಕಾರಿಗಳಿಗೆ ಲಂಚಕ್ಕಾಗಿ ಪೀಡಿಸ್ತಿದ್ದಾರೆ.
6-8 ಲಕ್ಷ ರೂಪಾಯಿ ಲಂಚ ನೀಡುವಂತೆ ಮೇಲಾಧಿಕಾರಿಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ ಸಚಿವರು,ಈ ಲಂಚಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ರೆ ಕುಟುಂಬ ಸಮೇತ ವಿಷ ಕುಡಿಯೋದಾಗಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ರಾಜ್ಯ ಪಾಲರ ಅದೀನ ಕಾರ್ಯದರ್ಶಿ ಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ಪತ್ರದ ಮೂಲಕ ನಿರ್ದೇಶನ ಮಾಡಿದ್ದಾರೆ.
ವರದಿ : ಬಸವರಾಜ ಹೂಗಾರ