ಮಂಗಳೂರು : ಕರಾವಳಿಯಲ್ಲಿ ಒಂದಲ್ಲ ಒಂದು ನೈತಿಕ ಪೊಲೀಸ್ಗಿರಿ ಘಟನೆಗಳು ನಡೆಯುತ್ತಿದ್ದು, ಇದೀಗ ನಿನ್ನೆ ತಡ ರಾತ್ರಿ ಹಿಂದೂ ಯುವತಿಯನ್ನು ಆಟೋದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಮತ್ತೆ ನೈತಿಕ ಪೊಲೀಸ್ಗಿರಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಸ್ ನಿಲ್ದಾಣದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್(22) ಎಂಬಾತ ಹಿಂದೂ ಯುವತಿಯನ್ನು ಆಟೋದಲ್ಲಿ ಕೂರಿಸಿಕೊಂಡು ತೆರಳುವಾಗ ಹಲ್ಲೆಗೆ ಮಂದಾಗಿದ್ದಾರೆ ಎಂದು ವರದಿಯಾಗಿದೆ ಈ ಹಿಂದೆ ಮಂಗಳೂರಿನ ಖಾಸಗಿ ವೆಬ್ಸೈಟೊಂದರ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿರುವುದು ತಿಳಿಯಬಹುದಾಗಿದೆ.