ಬೆಂಗಳೂರು : ಸದಾ ಒಂದಲ್ಲ ಒಂದು ಸುದ್ದಿಯ ಮೂಲಕ ಜನ ಗಮನಸೆಳೆಯವ ನಮ್ಮ ಹೆಮ್ಮೆಯ ನಂದಿನಿ ಬ್ರಾಂಡ್ ಇದೀಗ ಮತ್ತೊಂದು ಹೊಸ ವಿಚಾರ ಮೂಲಕ ಸದ್ದು ಮಾಡುತ್ತಿದೆ. ನಮ್ಮ ರಾಜ್ಯದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ(KMF ) ನಂದಿನಿ ಬ್ರ್ಯಾಂಡ್ ಒಂದು ಸ್ಥಾನ ಮೇಲಕ್ಕೇರಿದ್ದು, ಮುಖ ಮಾರ್ಕೆಟಿಂಗ್ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಯಾದ ಕಾಂತಾರ್ ‘ಬ್ರ್ಯಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ’ ವರದಿಯನ್ನು ಪ್ರಕಟಿಸಿದೆ.
ಅದರಲ್ಲಿ ನಮ್ಮ ರಾಜ್ಯದ ಕರ್ನಾಟಕ (KMF) ನಂದಿನಿಬ್ರ್ಯಾಂಡ್ ಮೊದಲ 6ನೇ ಸ್ಥಾನದಲ್ಲಿದ್ದ ನಂದಿನ ಇದೀಗ 5ನೇ ಸ್ಥಾನಕ್ಕೆ ಬಂದಿರೊದು.ನಮಗೆಲ್ಲ ಹೆಮ್ಮೆ ಪಡುವಂತ ವಿಷಯ ಇದರೊಂದಿಗೆ ಹಲವಾರು ವಿವಾದಗಳ ನಡುವೆಯೂ ನಂದಿನಿ ಟಾಪ್ 10 ನಲ್ಲಿ ಸ್ಥಾನ ಪಡೆದುಕೊಂಡಿದೆ.
ಇನ್ನೂ ಯಾವ ಯಾವ ಬ್ರ್ಯಾಂಡ್‌ಗಳು ಎಷ್ಟನೆ ಸ್ಥಾನ ಪಡೆದಿವೆ ಅಂತಾ ನೊಡೊದಾದರೆ. ಪಾರ್ಲೆ ಮೊದಲ ಸ್ಥಾನ ಪಡೆದರೆ,ಬ್ರಿಟಾನಿಯಾ ಎರಡನೇ ಸ್ಥಾನಕ್ಕೆ,ಇನ್ನೂ ನಮ್ಮ ನಂದಿನಿ ಬ್ರಾಂಡಗೆ ಪೈಪೊಟಿ ಕೊಡಲ್ಲೂ ಬಂದಿದ ಅಮುಲ್ ಮೂರನೇ ಸ್ಥಾನ ಪಡೆದಿದ್ದು ನಮ್ಮ ಹೆಮ್ಮೆಯ ನಂದಿನಿ ಐದನೇ ಸ್ಥಾನ ಪಡೆದು ಕೊಂಡಿದ್ದು, ನಮಗೆಲ್ಲ ಹೆಮ್ಮೆ ಪಡೊ ವಿಷಯ.