ಬೆಂಗಳೂರು : ಇಂದಿನಿಂದಲೇ ದುಬಾರಿ ಜೀವನ ಶುರುವಾಗಲಿದ್ದು, ಇಂದಿನಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳವಾಗಲಿದೆ ಈ ಮೂಲಕ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದಂತೂ ಗ್ಯಾರಂಟಿಯಾಗಿದೆ.
ಜುಲೈ 21ರಂದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಿ, ನಂದಿನಿ ಹಾಲು ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗುವ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಈ ಹಿಂದೇ ಹಾಲಿನ ದರವನ್ನು 5.ರೂಪಾಯಿ ಏರಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿತ್ತು. ಈ ವಿಚಾರವಾಗಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಮುಂದಿನ ಆಗಸ್ಟ್ 1ರಿಂದಲೇ ಹಾಲಿನ ದರವನ್ನು 3 ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಎಂಬ ತೀರ್ಮಾನಿಸಲಾಗಿತ್ತು.
ಈ ನಿಟ್ಟಿನಲ್ಲಿ ಇಂದಿನಿಂದಲೇ ರಾಜ್ಯಾದ್ಯಂತ ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆಯಾಗಿದೆ. ಈ ಮೂಲಕ ಜನ ಸಾಮಾನ್ಯರ ಜೀವನ ಬಲು ದುಬಾರಿಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿರೋದಂತೂ ಗ್ಯಾರಂಟಿಯಾಗಿದೆ.
ಟೋನ್ಡ್ ಹಾಲಿನ ಹಿಂದಿನ ದರ 39 ರೂ., ಪರಿಷ್ಕೃತ ದರ 42 ರೂ. ಆಗಲಿದೆ.
ಹೋಮೋಜಿನೈಸ್ಡ್ ಹಾಲಿನ ಹಿಂದಿನ ದರ 40 ರೂ., ಪರಿಷ್ಕೃತ ದರ 43 ರೂ.
ಹಸುವಿನ ಹಾಲು(ಹಸಿರು ಪೊಟ್ಟಣ) ಹಿಂದಿನ ದರ 43, ಪರಿಷ್ಕೃತ ದರ 46 ರೂ.
ಶುಭಂ ಹಾಲಿನ ಹಿಂದಿನ ದರ 45 ರೂಪಾಯಿ, ಪರಿಷ್ಕೃತ ದರ 48 ರೂ.
ಮೊಸರು ಪ್ರತಿ ಲೀಟರ್‌ಗೆ ಹಿಂದಿನ ದರ 47 ರೂ., ಪರಿಷ್ಕೃತ ದರ 50 ರೂ.
ಮಜ್ಜಿಗೆ 200ml ಹಿಂದಿನ ದರ 8 ರೂಪಾಯಿ, ಪರಿಷ್ಕೃತ ದರ 9 ರೂ. ಆಗಲಿದೆ.