ಬೆಂಗಳೂರು : ಕರ್ನಾಟಕದಲ್ಲಿ ಆಗಸ್ಟ್ 1ರಿಂದಲೇ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದ ಬೆನ್ನಲ್ಲೆ ನಿನ್ನೆ ಹಳೆಯ ದರದಲ್ಲೇ ಮಾರಾಟವಾಗಿದ್ದು, ಇಂದು ಹೊಸ ಹಾಲು, ಮೊಸರು, ಮಜ್ಜಿಗೆ ಪ್ಯಾಕೆಟ್ ಬಂದಿದೆ.
ದಿನಗಳಿಂದ ರಾಜ್ಯದಲ್ಲಿ ದಿನಬಳಕೆ ವಸ್ತುಗಳು ಗಗನಕ್ಕೆ ಇರುತ್ತವೆ. ನಿಮಗೆಲ್ಲ ಗೊತ್ತಿರೋ ಹಾಗೆ ಕೆಲ ದಿನಗಳ ಹಿಂದೆ ಎಷ್ಟೇ ಟೊಮ್ಯಾಟೋ ಬೆಲೆ ಏರಿಕೆಯಾಗಿತ್ತು. ಅದರ ಬೆನ್ನಲ್ಲೇ ಒಂದರ ಹಿಂದೆ ಒಂದು ಅನ್ನುವಂತೆ ದಿನನಿತ್ಯ ಬಳಕೆ ಮಾಡುವ ಎಲ್ಲಾ ಪದಾರ್ಥಗಳ ಬೆಲೆ ಏರುತ್ತಲೇ ಇವೆ.
ಹೀಗಾಗಿ ದಿನದಿಂದ ದಿನಕ್ಕೆ ದರ ಏರಿಕೆ ಆಗ್ತಾ ಇರುವುದರಿಂದ ಹೋಟೆಲ್ಗಲ್ಲು ಕೂಡ ದರ ಏರಿಕೆ ಮಾಡಲಾಗಿದೆ ನಿಮಗೆಲ್ಲಾ ಗೊತ್ತಿರೋ ಹಾಗೆ ಬೆಂಗಳೂರು ನಗರದಲ್ಲಿ ನೆನ್ನೆಯಿಂದ ಹೋಟೆಲ್ ಗಳಲ್ಲಿ ಕಾಫಿ ಟೀ ತಿಂಡಿ ಎಲ್ಲದರ 10% ನಷ್ಟು ಬೆಲೆ ಜಾಸ್ತಿ ಮಾಡಲಾಗಿದೆ. ಸಾಕಷ್ಟು ದಿನಗಳಿಂದ ಹಾಲಿನ ದರ ಕೂಡ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇತ್ತು.
ಹೀಗಾಗಿ ಜುಲೈ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿ ಲೀಟರ್ ಹಾಲಿನ ಮೇಲೆ ರೂ.3 ಹೆಚ್ಚಳ ಮಾಡೋದಾಗಿ ತಿಳಿಸಲಾಗಿತ್ತು. ಅದರಂತೆ ಆಗಸ್ಟು ಒಂದರಿಂದ ಅಧಿಕೃತವಾಗಿ ಜಾರಿ ಬರುವಂತೆ ಆದೇಶ ಕೂಡ ಹೊರಡಿಸಲಾಗಿತ್ತು. ಇದರಂತೆ ನಿನ್ನಿಂದ ಪ್ರತಿ ಲೀಟರ್ ಹಾಲಿನ ಮೇಲೆ ರೂ.3 ಹೆಚ್ಚಳವಾಗಿದೆ.
ನೆನ್ನೆ ನಗರದ ಹಲಗೆ ಹಳೆ ದರದ ಹಾಲಿನ ಪ್ಯಾಕೆಟ್ ಗಳನ್ನ ಹೊಸ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಆರೋಪ ಕೇಳಿ ಬಂದಿತ್ತು. ಹೀಗಾಗಿ ಇವತ್ತಿನಿಂದ ಎಲ್ಲಾ ಹಾಲಿನ ಪ್ಯಾಕೆಟ್ಗಳ ಮೇಲೆ ಪ್ರಿಂಟ್ ಹಾಕಿರುವ ಹೊಸ ದರದ ಹಾಲಿನ ಪ್ಯಾಕೆಟ್ಗಳು ಮಾರಾಟ ಮಾಡಲಾಗುತ್ತಿದೆ. ಇನ್ನು ಸಾಕಷ್ಟು ಕಡೆ ಹಳೆ ದರ ಇರುವ ಹಾಲಿನ ಪ್ಯಾಕೆಟ್ ಗಳೇ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.