ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ, ವಾಟ್ಸಾಪ್ ಸಂದೇಶಗಳಿಗೆ ಸಂಬಂಧಿಸಿದಂತೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶಗಳು ವಾಟ್ಸಾಪ್‌ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ಮತ್ತು ಫೋನ್ ಕರೆಗಳಿಗೆ ನಾಳೆಯಿಂದ ಅನ್ವಯವಾಗುವ ಹೊಸ ಸಂವಹನ ನಿಯಮಗಳು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಸಂದೇಶಗಳಲ್ಲಿ ಪ್ರಸ್ತಾಪಿಸಿರುವ ಹೊಸ ನಿಯಮಗಳು ಈ ಕೆಳಗಿನಂತಿವೆ:
- ಎಲ್ಲಾ ಕರೆಗಳು ರೆಕಾರ್ಡಿಂಗ್ ಆಗುತ್ತಿವೆ.
- ಎಲ್ಲಾ ಕರೆ ರೆಕಾರ್ಡಿಂಗ್‌ಗಳನ್ನು ಉಳಿಸಲಾಗುತ್ತದೆ.
- WhatsApp, Facebook, Twitter ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
- ಗೊತ್ತಿಲ್ಲದ ಎಲ್ಲರಿಗೂ ತಿಳಿಸಿ.
- ನಿಮ್ಮ ಸಾಧನಗಳು ಸಚಿವಾಲಯದ ವ್ಯವಸ್ಥೆಗೆ ಸಂಪರ್ಕಗೊಳ್ಳುತ್ತವೆ.
- ಯಾರಿಗೂ ತಪ್ಪು ಸಂದೇಶಗಳನ್ನು ಕಳುಹಿಸದಂತೆ ಎಚ್ಚರಿಕೆ ವಹಿಸಿ.
- ನಿಮ್ಮ ಮಕ್ಕಳು, ಸಹೋದರರು, ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರಿಗೆ ನೀವು ಎಚ್ಚರಿಕೆಯಿಂದ ಇರಬೇಕು ಮತ್ತು ಕಡಿಮೆ ಸಾಮಾಜಿಕ ತಾಣಗಳನ್ನು ಬಳಸಬೇಕೆಂದು ತಿಳಿಸಿ.
- ರಾಜಕೀಯ ಅಥವಾ ಪ್ರಚಲಿತ ವಿದ್ಯಮಾನಗಳ ಕುರಿತು ಸರ್ಕಾರ ಅಥವಾ ಪ್ರಧಾನ ಮಂತ್ರಿಯ ಮುಂದೆ ನಿಮ್ಮ ಪೋಸ್ಟ್ ಅಥವಾ ವೀಡಿಯೊ… ಇತ್ಯಾದಿ. ಕಳುಹಿಸಬೇಡಿ
- ಪ್ರಸ್ತುತ ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿಷಯದ ಬಗ್ಗೆ ಸಂದೇಶಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧವಾಗಿದೆ … ಮತ್ತು ವಾರಂಟ್ ಇಲ್ಲದೆ ಬಂಧಿಸುವುದು.
- ಪೋಲೀಸ್ ಅಧಿಸೂಚನೆ ಹೊರಡಿಸಿ… ಸೈಬರ್ ಕ್ರೈಮ್ ನಂತರ… ಕ್ರಮ ತೆಗೆದುಕೊಳ್ಳಿ, ಇದು ತುಂಬಾ ಗಂಭೀರವಾಗಿದೆ.
- ದಯವಿಟ್ಟು ನೀವೆಲ್ಲರೂ, ಗುಂಪಿನ ಸದಸ್ಯರು, ನಿರ್ವಾಹಕರು,…ದಯವಿಟ್ಟು ಈ ವಿಷಯವನ್ನು ಪರಿಗಣಿಸಿ.
- ತಪ್ಪು ಸಂದೇಶವನ್ನು ಕಳುಹಿಸದಂತೆ ಎಚ್ಚರವಹಿಸಿ ಮತ್ತು ಎಲ್ಲರಿಗೂ ತಿಳಿಸಿ ಮತ್ತು ಎಚ್ಚರದಿಂದಿರಿ.
- ದಯವಿಟ್ಟು ಇದನ್ನು ಹಂಚಿಕೊಳ್ಳಿ.
ಗುಂಪುಗಳು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಜಾಗರೂಕರಾಗಿರಬೇಕು. ಗುಂಪಿನ ಸದಸ್ಯರಿಗೆ WhatsApp ಕುರಿತು ಪ್ರಮುಖ ಮಾಹಿತಿ.
ವಾಟ್ಸ್ ಆಪ್ ನಲ್ಲಿ ಮಾಹಿತಿ
- ✔= ಸಂದೇಶ ಕಳುಹಿಸಲಾಗಿದೆ
- ✔✔ = ಸಂದೇಶವನ್ನು ತಲುಪಿಸಲಾಗಿದೆ
- ಎರಡು ನೀಲಿ ✔✔ = ಸಂದೇಶ ಓದಿ
- ಮೂರು ನೀಲಿ ✔✔✔= ಸರಕಾರದ ಸಂದೇಶವನ್ನು ಗಮನಿಸಿ
- ಎರಡು ನೀಲಿ ಮತ್ತು ಒಂದು ಕೆಂಪು ✔✔✔= ಸರ್ಕಾರವು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು
- ಒಂದು ನೀಲಿ ಮತ್ತು ಎರಡು ಕೆಂಪು = ಸರ್ಕಾರವು ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಿದೆ
- ಮೂರು ಕೆಂಪು ✔✔✔= ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಶೀಘ್ರದಲ್ಲೇ ನೀವು ನ್ಯಾಯಾಲಯದ ಸಮನ್ಸ್ ಪಡೆಯುತ್ತೀರಿ. ಜವಾಬ್ದಾರಿಯುತ ನಾಗರಿಕರಾಗಿರಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಎಂಬ ಸಂದೇಶವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ಇಂತಹ ಪ್ರಸ್ತಾಪವನ್ನು ಸರ್ಕಾರವಾಗಲಿ ಅಥವಾ ದೂರ ಸಂಪರ್ಕ ಇಲಾಖೆಯಾಗಲಿ ಪ್ರಕಟಣೆ ಮೂಲಕ ಆದೇಶಿಸಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
✔✔ ಟಿಕ್ ಚಿಹ್ನೆಗೆ ಸಂಬಂಧಿಸಿದಂತೆ, ಕರೆಗಳನ್ನು ರೆಕಾರ್ಡಿಂಗ್ ಮಾಡಲಾಗುತ್ತದೆ ಮತ್ತು ಪ್ರತಿ ಸಂದೇಶಗ ಮೇಲೂ ನಿಗಾ ಇಡಲಾಗಿದೆ ಎಂದು ಹಂಚಿಕೊಳ್ಳಲಾದ ಸಂದೇಶಗಳ ಹಿನ್ನಲೆಯ ವಾಸ್ತವವೇನು ಎಂದು ಪರಿಶೀಲಿಸಿದಾಗ ವೈರಲ್ ಸಂದೇಶಲ್ಲಿ ಹೇಳಿರುವ ಅಂಶಗಳು ಫೇಕ್ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ತಿಳಿಸಿದೆ.
✔✔✔ ನ ಫೀಚರ್ಸ್ ಇಲ್ಲವೇ ಇಲ್ಲ!
ಟಿಕ್ ಮಾರ್ಕ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ‘WhatsApp’ ವೆಬ್‌ಸೈಟ್‌ನಲ್ಲಿ ನೋಡಬಹುದು. FAQ ವಿಭಾಗದಲ್ಲಿ, ಒಂದೇ ಟಿಕ್ ಮಾರ್ಕ್ ಮತ್ತು ಎರಡು ಟಿಕ್ ಮಾರ್ಕ್‌ಗಳ ಬಗ್ಗೆ ಮಾಹಿತಿ ಇದೆ, ಆದರೆ ಅವರ ಪ್ಲಾಟ್‌ಫಾರ್ಮ್‌ನಲ್ಲಿ ಮೂರು ಟಿಕ್ ಮಾರ್ಕ್‌ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ವಾಟ್ಸಾಪ್ ನಲ್ಲಿ ಅಂತಹ ಯಾವುದೇ ಫೀಚರ್ ಇಲ್ಲ.
ಇನ್ನು ಸಂದೇಶಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಿಟ್ಟು ಮೂರನೇ ವ್ಯಕ್ತಿ ಇಲ್ಲಿಯ ಸಂದೇಶಗಳನ್ನು ಓದಲು ಸಾಧ್ಯವೇ ಎಂದು ಪರಿಶೀಲಿಸಲು ವೆಬ್‌ಸೈಟ್ ಸರ್ಚ್ ಮಾಡಿದಾಗ ಅಂತಹ ಸಾಧ್ಯತೆಗಳಿಲ್ಲ ಎಂದು ಉಲ್ಲೇಖಿಸಿದೆ.
ಒಟ್ಟಾರೆಯಾಗ ಹೇಳುವುದಾದರೆ, WhatsApp ನಲ್ಲಿ ಯಾವುದೇ ‘ಮೂರು ಟಿಕ್ ಮಾರ್ಕ್ಸ್’ ವೈಶಿಷ್ಟ್ಯವಿಲ್ಲ. ಅಲ್ಲದೆ, ಸರ್ಕಾರವು ಸಂದೇಶಗಳನ್ನು ಓದಲು ಸಾಧ್ಯವಾಗುವುದಿಲ್ಲ. ಈ ಸಂದೇಶ 2019ರಿಮದಲೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಲಲ್ಲಿ ಹರಿದಾಡುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ನಕಲಿ ಪೋಸ್ಟ್ಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಗಟ್ಟುವ ಉದ್ದೇಶದಿಂದಲೇ ಫ್ಯಾಕ್ಟ್ ಚೆಕ್ ಘಟಕವನ್ನು ತೆರೆಯಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಾಟ್ಸಾಪ್ ಗೆ ಸಂಬಂಧಿಸಿದ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ.