ಬೆಂಗಳೂರು : ಲೋಕಸಭೆ ಚುನಾವಣೆ ಜವಾಬ್ದಾರಿ ನೀಡಿದ್ದಾರೆ. ಭ್ರಷ್ಟಾಚಾರ ಮತ್ತೊಂದು ನಮ್ಮ ಪಕ್ಷದಲ್ಲಿ ಇಲ್ಲ ಎಂದು ಸಚಿವ ಶಿವರಾಜ್ ತಂಗಡಿಗಿ ಹೇಳಿದ್ದಾರೆ.
ಭ್ರಷ್ಟಾಚಾರ ಆರೋಪ ವಿಚಾರ ದೆಹಲಿಯಲ್ಲಿ ಚರ್ಚೆ ಆಗಿದೆಯಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ಭ್ರಷ್ಟಾಚಾರ ಮತ್ತೊಂದು ನಮ್ಮ ಪಕ್ಷದಲ್ಲಿ ಇಲ್ಲ.ಹಾಗಾಗಿ ಅದರ ಬಗ್ಗೆ ಚರ್ಚೆಯೇ ಇಲ್ಲ.ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ವಿಧಾನಸಭೆ ಚುನಾವಣೆಯಲ್ಲಿ 135 ಸೀಟು ಗೆದ್ದಿದ್ದೇವೆ.ಲೋಕಸಭೆಯಲ್ಲಿ ಕೂಡ ಹೆಚ್ಚು ಸ್ಥಾನ ಗೆಲ್ಲುತ್ತೇವೆ.ಅದನ್ನ ಕಾರ್ಯರೂಪಕ್ಕೆ ತರುತ್ತೇವೆ.
ಹಾಲಿ ಸಚಿವರು ನಿಲ್ಲುವ ಬಗ್ಗೆ ಯಾವುದೂ ಚರ್ಚೆಯಾಗಿಲ್ಲ ಎಂದರು.ಇನ್ನೂ ಕೊಪ್ಪಳ ಜಿಲ್ಲೆಯಲ್ಲಿ ವಿಷದ ನೀರು ಕುಡಿದು ಪರಿಹಾರ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿ ಮೂವರಿಗೆ ಪರಿಹಾರ ಕೊಡುವ ಕೆಲಸ ಆಗ್ತಿದೆ.ಈಗಾಗಲೇ ಹಣ ಕೊಡುವ ಕೆಲಸ ಆಗ್ತಿದೆ ಎಂದು ಹೇಳಿದರು.ಬಸವರಾಜ ರಾಯರೆಡ್ಡಿ ಅಸಮಧಾನ ಹೇಳಿಕೆ ವಿಚಾರವಾಗಿ ಮಾತನಾಡಿ ಬಸವರಾಜ್ ರಾಯರೆಡ್ಡಿ ನಮ್ಮ ಹಿರಿಯರು.ನನ್ನ ಮೇಲೆ ಆಕ್ರೋಶ ವ್ಯಕ್ತಪಡಿಸೋ ಮಾತೇ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋಗ್ತಿದ್ದೇವೆ ಎಂದು ಹೇಳಿದರು.
ಸಿದ್ದರಾಮಯ್ಯ ವೀಕ್ ಅನ್ನೋ ಆರೋಪವಾಗಿ ಮಾತನಾಡಿ ಸಿದ್ದರಾಮಯ್ಯ ವೀಕ್ ಅನ್ನೋ ವಿಚಾರ ಸುಳಿಯೋದೇ ಇಲ್ಲ.ಅವರು ಸಮರ್ಥರಿದ್ದಾರೆ. ಬೊಮ್ಮಾಯಿ ಅವರು ವೀಕ್ ಆಗಿದ್ದಾರೆ. ಆ ಆರೋಪವನ್ನ ಸಿದ್ದರಾಮಯ್ಯ ಮೇಲೆ ಮಾಡ್ತಿದ್ದಾರೆ.
RSS ಮುಂದೆ ಬೊಮ್ಮಾಯಿ ಅವರು ವೀಕ್ ಆಗಿದ್ದಾರೆ. ನಮ್ಮ ಸಿಎಂ ಆಗಲಿ, ಡಿಸಿಎಂ ಆಗಲಿ ಇಬ್ಬರೂ ವೀಕ್ ಆಗಿಲ್ಲ. ಸಿದ್ದರಾಮಯ್ಯ ಅವರು ಸಮರ್ಥ ನಾಯಕ ಎಂದು ಹೇಳಿದರು
ವರದಿ : ಬಸವರಾಜ ಹೂಗಾರ