ಬೆಂಗಳೂರು : ರೈತರ ಜೀವನಾಡಿ ಆಗಿರುವ ಕೆ.ಎಮ್.ಎಫ್ ನಂದಿನಿ ಉತ್ಪನ್ನಗಳಿಗೆ ನೂತನ ರಾಯಭಾರಿಯಾಗಿ ನಟ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಕುರಿತು ಮಾತನಾಡಿದ ಶಿವರಾಜ್ ಕುಮಾರ್, ‘ನಂದಿನಿ ಜಾಹೀರಾತಿಗಾಗಿ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ಇದು ನಮ್ಮ ಕರ್ತವ್ಯ. ದೊಡ್ಡ ತ್ಯಾಗ ಏನಲ್ಲ’ ಎಂದಿದ್ದಾರೆ.
ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್, ‘ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಬೇಕು. ಖುಷಿಯಾಗುತ್ತೆ. ಸರ್ಕಾರ ನಮ್ಮಕುಟುಂಬಕ್ಕೆ ಗೌರವ ನೀಡಿ ನೀಡಿದ್ದಕ್ಕೆ. ಇದು ರೈತರಿಗೆ ಸಂಬಂಧಿಸಿದ ವಿಚಾರ. ನಂದಿನಿ ಎಂಬ ಭರವಸೆಗೆ ಭಾರತಾದ್ಯಂತ ಬೇಡಿಕೆಯಿದೆ. ಈ ಬೇಡಿಕೆಗೆ ಜೆನ್ಯೂನ್ ಆಗಿ ನಮ್ಮ ಸಹಕಾರ ಇರುತ್ತೆ. ಬರೀ ಬಂದು ಫೋಟೋ ಕೊಡೋದು ಚಿತ್ರಿಕರಣ ಮಾಡೋದಲ್ಲ. ಸಮಯ ಇದ್ದಾಗ ಪ್ರಚಾರವೂ ಮಾಡುವೆ.’ ಎಂದಿದ್ದಾರೆ.
ಅಲ್ಲದೇ, ನಂದಿನಿ ಉತ್ಪನ್ನವನ್ನೇ ನಮ್ಮ ಮನೆಯಲ್ಲಿ ಬಳಕೆ ಮಾಡ್ತೇವೆ. ನಮ್ಮ ಮನೆಯ ಹತ್ತಿರದಲ್ಲೇ ನಂದಿನಿ ಪಾರ್ಲರ್ ಇದೆ. KMF ಹಾಲಿನ ಪ್ರಚಾರಕ್ಕೆ ಆ್ಯಡ್ ಶೂಟಿಂಗ್ ಸದ್ಯ ಪ್ಲ್ಯಾನ್ ನಡೆಯುತ್ತಿದೆ ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕೆಎಂಎಫ್ ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ (Ambassador) ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ (Raj Kumar) ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದರು.