ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಸರಗಳ್ಳತನ ಮಾಡಿದ್ದ ಆರೋಪಿ ಅಚ್ಯುತ್ ಎಂಬಾತನನ್ನು ಬನಶಂಕರಿ ಪೊಲೀಸರಿಂದ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.
ಅಚ್ಯುತ್ ಮೇಲೆ ಸುಮಾರು 105 ಹೆಚ್ಚು ಪ್ರಕರಣ ದಾಖಲಾಗಿತ್ತು. 2018 ರಲ್ಲಿ ಕೆಂಗೇರಿ ಪೊಲೀಸರ ಕೈಗ ಸಿಕ್ಕಿಬಿದ್ದಿದ್ದ ಆರೋಪಿ ಅಚ್ಯುತ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ನಂತರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.
ಸುಮಾರು 70 ಪ್ರಕರಣದಲ್ಲಿ 3.5ಕೆ.ಜಿ ಚಿನ್ನ ವಶಕ್ಕೆ ಪಡೆಯಲಾಗಿತ್ತು. ನಂತರ ಜೈಲಿಂದ ಹೊರಬಂದು ಮತ್ತೆ ಸರಗಳ್ಳತನ ಶುರುಮಾಡಿದ್ದನು. ಶೇಷಾದ್ರಿಪುರಂ ಪೊಲೀಸರು ಮತ್ತೆ ಆತನನ್ನ ಬಂದಿಸಿ ಜೈಲಿಗಟ್ಟಿದ್ದರು. ಕಳೆದ ಏಪ್ರಿಲ್‌ನಲ್ಲಿ ಹೊರಬಂದು ಮತ್ತೆ ಸರಗಳ್ಳತನ ಶುರುಮಾಡಿದ್ದ, ಸದ್ಯ ಬನಶಂಕರಿ ಪೊಲೀಸರಿಂದ ಮತ್ತೆ ಅಚ್ಯುತ್ ಬಂಧಿಸಿ, ಆರೋಪಿಯಿಂದ 9.40 ಲಕ್ಷ ಮೌಲ್ಯದ 4 ಚಿನ್ನದ ಸರ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.