ಬೆಂಗಳೂರು : ಗ್ಯಾರಂಟಿ ಸರ್ಕಾರ ಕೆಡವಲು ತೆರೆ ಮರೆಯಲ್ಲಿ ಪ್ಲಾನ್ ನಡೆಯುತ್ತಿದೆ ಎಂದು ರಾಜ್ಯ ರಾಜಕೀದಲ್ಲಿ ಚರ್ಚೆ ಆಗ್ತಾಯಿದೆ. ಮಾಜಿ ಸಿಎಂ ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿ ಇದಾರೆ. ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರು ವಿದೇಶ ಪ್ರವಾಸದಲ್ಲಿರುವುದು ಸಾಕಷ್ಟು ಕೂತಹಲಕ್ಕೆ ಎಡೆ ಮಾಡಿಕೊಡುತ್ತಿದೆ. ಕಾಂಗ್ರೆಸ್ ಸರ್ಕಾರವನ್ನ ಕೆಡವಲು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮೇಗಾ ಪ್ಲಾನ್ ಹಾಕ್ತಾಯಿದಾರೆ ಎಂಬ ಮಾಹಿತಿ ರಾಜ್ ನ್ಯೂಸ್ ಗೆ ಲಭ್ಯವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದರೆ. ಸರ್ಕಾರ ರಾಜ್ಯದಲ್ಲಿ ಬದಲಾವಣೆ ಆಗುವುದು ಫಿಕ್ಸ್ ಎನ್ನುತ್ತೇವೆ ಹಲವು ಮೂಲಗಳು. ಈಗಾಲೇ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಮೂರು ಹಂತದಲ್ಲಿ ಶಾಸಕರನ್ನ ಗುರಿತಿಸಿದ್ದಾರೆ. ಉದ್ಯಮಿಗಳು,ಮೊದಲಬಾರಿ ವಿಧಾನಸಭೆಗೆ ಆಯ್ಕೆ ಆದ ಶಾಸಕರು, ಸಚಿವ ಸ್ಥಾನ ಸಿಗದೆ ಅಸಮಧಾನ ಗೊಂಡ ಶಾಸಕರು. ಈ ಮೂರು ಹಂತದ ಶಾಸಕರನ್ನ ಟಚ್ ಮಾಡಲು ಪ್ಲಾನ್ ರೆಡಿ ಆಗುತ್ತಿದೆ ಅಂತೆ. ಈ ವಿಚಾರ ಕಾಂಗ್ರೆಸ್ ಪಕ್ಷದಲ್ಲಿಯೂ ಚರ್ಚೆ ಆಗುತ್ತಿದೆ. ಈ ಕುರಿತು ಕಾಂಗ್ರೆಸ್ ಶಾಸಕರನ್ನ ಅಲರ್ಟ್ ಮಾಡಿದ್ದಾರೆ ಎನ್ನಲಾಗಿದೆ. ಈಗಾ ಕಾಂಗ್ರೆಸ್ ಗೆ ಇರುವುದು ಒಂದೇ ಉಪಾಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಗಳಿಸಿದಂತೆ ಮಾಡುವುದು ಎಂದು ಕಾಂಗ್ರೆಸ್ ಹಿರಿಯ ನಾಯಕರು ಎಲ್ಲಾ ಪ್ರಮುಖರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ವರದಿ : ಬಸವರಾಜ ಹೂಗಾರ