ಬೆಂಗಳೂರು : ಲೋಡ್ ಟೆಸ್ಟಿಂಗ್ ಮಾಡುವ ಹಿನ್ನೆಲೆ ಜನವರಿ16 ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಮೂರು ದಿನ ಪೀಣ್ಯ ಫ್ಲೈಓವರ್ ಬಂದ್ ಆಗಲಿದೆ.
ಜ.16ರಿಂದ ಪೀಣ್ಯ ಫ್ಲೈಓವರ್ ಬಂದ್ ಆಗುವ ಕಾರಣದಿಂದಾಗಿ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ವಾರ ತುಮಕೂರು ರಸ್ತೆಯಲ್ಲಿ ಬೃಹತ್ ವಾಹನ ದಟ್ಟಣೆ ಉಂಟಾಗಲಿದೆ ಎಂದು ವರದಿಗಳು ತಿಳಿಸಿವೆ.