ಬೆಂಗಳೂರು : ಪ್ರಧಾನಿ ಮೋದಿ ಅವರು ಮೈಕಾಸೂರನಾಗಿ ಕಾಣುತ್ತಿದ್ದಾರೆ. ಮೈಕ್ ಎಲ್ಲಿ ಕಾಣುತ್ತದೆ. ಅಲ್ಲಿ ಪುಂಕಾಣು ಪುಂಕವಾಗಿ ಮಾತಾಡುತ್ತಾರೆ ಎಂದು ಮಾಜಿ ಸಂಸದ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಂಸದ ಉಗ್ರಪ್ಪ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಭಾರತದಲ್ಲಿ ಇಂತಹ ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಬಂದಿರಲಿಲ್ಲ. ನಮ್ಮ ಸಹೋದರ, ಸಹೋದರಿಯರು ಮಣಿಪುರದಲ್ಲಿ ಸಾವನ್ನ ಅಪ್ಪುತ್ತಿದ್ದಾರೆ. ಕೆಲವರನ್ನ ಬೆತ್ತಲೆ ಮಾಡಿದ್ದಾರೆ. ಕೆಲವರನ್ನ ಕೊಲೆ ಮಾಡಿದ್ದಾರೆ, ಇದನ್ನ ನೋಡಿದ್ರೆ ಬೇರೆ ದೇಶಗಳು ನಮ್ಮ ದೇಶದ ಬಗ್ಗೆ ಏನ್ ತಿಳಿದುಕೊಳ್ಳಬಹುದು. ಹರಿಯಾಣ, ಮಣಿಪುರ ಸರ್ಕಾರ ಜನರನ್ನ ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ. ಕುಕಿ,ಮೈತಿಹಿ ಎಂಬ ಸಮುದಾಯಗಳ ನಡುವೆ ವಾರ್ ನಡೆಯುತ್ತಿದೆ. 14 ದಿನಗಳ ಕಾಲ ಎಫ್ಐಆರ್ ದಾಖಲು ಮಾಡಿಕೊಳ್ಳುವುದಿಲ್ಲ. ಮಣಿಪುರ ಸಿಎಂ, ಗೌರ್ನರ್, ರಾಷ್ಟ್ರ ಪತಿಗಳು ಏನ್ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.
ಇನ್ನು ಪ್ರಧಾನಿ ಮಂತ್ರಿಗಳು ಮೈಕಾಸೂರನಾಗಿ ಕಾಣುತ್ತಿದ್ದಾರೆ. ಮೈಕ್ ಎಲ್ಲಿ ಕಾಣುತ್ತದೆ ಅಲ್ಲಿ ಪುಂಕಾಣು ಪುಂಕವಾಗಿ ಮಾತಾಡುತ್ತಾರೆ. ಕರ್ನಾಟಕದಲ್ಲಿ ಸುದ್ದಿಗೊಷ್ಠಿಯನ್ನ ಮಾಡಿದ್ದಾರಾ..? ಪಾರ್ಲಿಮೆಂಟ್‌ಗೆ ಪ್ರಧಾನ ಮಂತ್ರಿಗಳು ಗೈರಾಗುತ್ತಾರೆ. ಗಲಭೆ ಸ್ಥಳಕ್ಕೂ ಭೇಟಿ ಕೊಡುವುದಿಲ್ಲ. ಹಾಗಾದ್ರೆ ಪ್ರಧಾನಿಗಳು ಏನ್ ಮಾಡುತ್ತಿದ್ದಾರೆ. ಶೋಕಿ ಲಾಲ್ ಮೋದಿ ಎಂದು ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.