ಬೆಂಗಳೂರು : ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ, ಈ ವಿಚಾರವಾಗಿ ಮಾಧ್ಯಮದೊಂದಿಗೆ ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದು, ಪ್ರಧಾನಮಂತ್ರಿಗಳ ಭೇಟಿ ಉಭಯ ಕುಶಲೋಪರಿ ಅಷ್ಟೇ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾಧ್ಯಮದೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರು ಉಭಯ ಕುಶಲೋಪರಿ ಮಾತನಾಡಿದ್ದು, ನೀವು ಚೆನ್ನಾಗಿದ್ದೀರಾ, ನಾವು ಚೆನ್ನಾಗಿದ್ದೀರ ಅಷ್ಟೇ ಬೇರೆ ಏನಿಲ್ಲ. ಅವರ ಜೊತೆ ಬೇರೆ ಏನು ಮಾತುಕತೆ ಮಾಡಿಲ್ಲ. ಮೊದಲ ಬಾರಿ ಭೇಟಿ ಮಾಡ್ತಿರೋದ್ರಿಂದ ಕುಶೋಲಪರಿ ಮಾತುಕತೆ ಅಷ್ಟೇ, ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆ ನಾವು ಮಾತನಾಡಿದ್ದೇವೆ. ಪಿಯೂಶ್ ಗೋಯಲ್ ಜೊತೆಗೂ ಮಾತುಕತೆ ಆಗಿತ್ತು. ಅವರು ಕೊಡೋಕೆ ಆಗಲ್ಲ ಅಂತ ಹೇಳಿದ್ದಾರೆ. ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಅವರು ರಾಜಕೀಯ ಮಾಡ್ತಿದ್ದಾರೆ. ರಾಜನಾಥ್ ಸಿಂಗ್ ಭೇಟಿ ಮಾಡಿ ಒಂದು ಏರ್ ಶೋ ಮಾಡಲಿಕ್ಕೆ ಹಿಂದೆ ಕೊಟ್ಟಿದ್ದರು. ಈ ಸಾರಿ ಮತ್ತೆ ಅವಕಾಶ ಕೊಡಿ ಅಂತ ಹೇಳಿದ್ದೇವೆ ಎಂದಿದ್ದಾರೆ.