ತುಮಕೂರು : ನಕ್ಸಲರಿಂದ ಪೊಲೀಸರ ಹತ್ಯಾಕಾಂಡ ಪ್ರಕರಣದ ಐವರು ಆರೋಪಿಗಳನ್ನು ಪಾವಗಡ ಪೊಲೀಸರು 19 ವರ್ಷಗಳ ಬಳಿಕ ಬಂಧನ ಮಾಡಿದ್ದಾರೆ.
ಆಂಧ್ರಪ್ರದೇಶದ ಗಂತಿಮೇರಿಯ ನಾಗರಾಜ್ (40), ಧರ್ಮಾವರಂನ ಪದ್ಮಾ(35) ತಾಮಗಿರಿಯ ಬೋಯ ಓಬಳೇಶ್ (40) ರಾಮಮೋಹನ್(42) ಹಾಗೂ ಆಂಜನೇಯಲು (44) ಬಂಧಿತರು. 2005 ಫೆಬ್ರವರಿ 11ರಂದು ನಡೆದಿದ್ದ ನಕ್ಸಲರಿಂದ ಪೊಲೀಸರ ಹತ್ಯಾಕಾಂಡ ಘಟನೆ ನಡೆದಿತ್ತು. ಘಟನೆಯಲ್ಲಿ 7 ಜನ ಪೊಲೀಸರು ಸೇರಿ ಓರ್ವ ನಾಗರಿಕ ಬಲಿಯಾಗಿದ್ದರು.