ಉಡುಪಿ : ಖಾಸಗಿ ಶಾಲೆಯ ಶೌಚಾಲಯದಲ್ಲಿ ಮೊಬೈಲ್ ವಿಡಿಯೋ ಮಾಡಿದ ಪ್ರಕರಣ ಸಂಬಂಧಿಸಿ ರಾಜ್ಯದಲ್ಲಿ ದ್ವೇಷದ ರಾಜಕಾರಣ ಸರಿಯಲ್ಲ ಎಂದು ಎಂಎಲ್‌ಸಿ ರವಿಕುಮಾರ್(MLC Ravikumar) ಎಂದ ಕಿಡಿಕಾರಿದ್ದಾರೆ
ಮಾಧ್ಯಮದೊಂದಿಗೆ ಎಂಎಲ್‌ಸಿ ರವಿಕುಮಾರ್ ಮಾತನಾಡಿ, ಇಡೀ ದೇಶದಾದ್ಯಂತ ಉಡುಪಿ ವಿಡಿಯೋ ಚಿತ್ರೀಕರಣ ಸುದ್ದಿಯಾಗಿದೆ. ವಿಡಿಯೋ ಮಾಡಿದ ವಿದ್ಯಾರ್ಥಿಗಳಾದ ಶಬನಾಜ್, ಆಲೀಫಾ,ಅಲಿಯಾರನ್ನ ಅರೆಸ್ಟ್ ಮಾಡಿಲ್ಲ. ಸಾಮಾನ್ಯವಾಗಿ ಯಾರು ಬೆಡ್ ರೂಂನಲ್ಲಿ ವಿಡಿಯೋ ಮಾಡಲ್ಲ. ಆದ್ರೆ ಉಡುಪಿ ಕಾಲೇಜಿನಲ್ಲಿ ಈ ರೀತಿಯ ವಿಡಿಯೋ ಮಾಡಿದ್ದಾರೆ. ಶೌಚಾಲಯದಲ್ಲಿ ಯಾರೂ ವಿಡಿಯೋ ಮಾಡಲ್ಲ ಇದು ಸರಿಯೇ ಮುಖ್ಯಮಂತ್ರಿಗಳು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಗೃಹ ಸಚಿವರು ಮಕ್ಕಳಾಟ ಅನ್ನುತ್ತಾರೆ. ನಾನು ಕೇಳ್ತೇನೆ ಇದು ಮಕ್ಕಳಾಟವೇ? ನನ್ನತ್ರ ವಿಡಿಯೋ ಇದೆ ಅಂತ ಹೆದರಿಸ್ತಾರಾ? ಸರ್ಕಾರಕ್ಕೆ ಯಾವುದರಲ್ಲೂ ಗಾಂಭೀರ್ಯತೆ ಇಲ್ಲ. ಇದು ಸರ್ಕಾರಕ್ಕೆ ತಮಾಷೆಯ ವಿಚಾರವಾಗಿದೆ. 14 ರಂದು ಈ ಘಟನೆಯಾಗಿದೆ. 24 ರಂದು ಇವರು ಎಫ್ ಐಆರ್ ಮಾಡ್ತಾರೆ . ಈ ಘಟನೆ ಸಂಬಂಧಿಸಿ ಇದು ಅಗೆದಷ್ಟು ಆಳಕ್ಕೆ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕಳೆದ ಐದಾರು ತಿಂಗಳಿಂದ ನಡೆಯುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಜಿಹಾದಿ, ಪಿಎಫ್ ಐ ಸಂಘಟನೆ ಕೈವಾಡ ಇದ್ಯಾ?ಇದು ಜೋಕ್ ವಿಷಯವಲ್ಲ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ತನಿಖೆಗಾಗಿ ಎನ್‌ಐಎಗೆ ಕೊಡಿ ಎಂದು ಆಗ್ರಹಿಸಿದ್ದಾರೆ
ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದಕ್ಕೆ ನಮ್ಮ ತುಮಕೂರು ಕಾರ್ಯಕರ್ತೆ ಶಕುಂತಲಾ ಅವರು ಸಣ್ಣ ಟ್ವೀಟ್ ಮಾಡಿದಕ್ಕೆ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಆ ವಿದ್ಯಾರ್ಥಿನಿ ವಿಡಿಯೋ ಮಾಡಿದವರ ಬಂಧನ ಇನ್ನೂ ಆಗಿಲ್ಲ. ರಶ್ಮಿ ಸಾಮಂತ್ ಟ್ವೀಟ್ ಮಾಡಿದ್ದಕ್ಕೂ ಅವರ ಮನೆಗೆ ಪೊಲೀಸರನ್ನು ಕಳಿಸ್ತಾರೆ. ಸರ್ಕಾರ ನಮ್ಮ ಕಾರ್ಯಕರ್ತರನ್ನ ಹೆದರಿಸುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಹಾಕುವವರ ಮೇಲೆ ಕೇಸ್ ಹಾಕ್ತಿದೆ. ಕಾನೂನು ಎಲ್ಲರಿಗೂ ಒಂದೇ ತಾನೇ, ನಾವು ಟ್ವೀಟ್ ಮಾಡಿದವರ ಮೇಲೆ ದೂರು ಕೊಡ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕೇಸ್ ಬರೀ ಬಿಜೆಪಿಯವರಿಗೆ ಮಾತ್ರ ಇದೆಯಾ..? ಕಾಂಗ್ರೆಸ್ಸಿಗರಿಗೆ ಇಲ್ವಾ ಕಾನೂನು..? ನೀವು ಎಷ್ಟು ಟ್ವೀಟ್ ಮಾಡಿಸಿದ್ದೀರಾ? ಮೋದಿ ಸೇರಿ ಬಗ್ಗೆ ಅನೇಕರ ಬಗ್ಗೆ ಮಾಡಿದ್ದಾರೆ. ಅಲ್ಲದೇ ಈ ರೀತಿಯ ದ್ವೇಷದ ರಾಜಕಾರಣ ಸರಿಯಲ್ಲ.ಉಡುಪಿಯಲ್ಲೂ ಕೂಡ ಇವತ್ತು ಪ್ರತಿಭಟನೆ ಮಾಡ್ತಿದ್ದಾರೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಆಗಸ್ಟ್ 1ರಂದು ಬೃಹತ್ ಹೋರಾಟ ಮಾಡುತ್ತೇವೆ ಎಂದಿದ್ದಾರೆ.