ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಕಾಂತ್ ಪೂಜಾರಿ ಹುಬ್ಬಳ್ಳಿಯ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಒಂಬತ್ತು ದಿನಗಳ ಜೈಲಿನಲ್ಲಿದ್ದ ರಾಮ ಭಕ್ತ ರಿಲೀಸ್ ಆಗಿದ್ದಾರೆ.
ಹೌದು.. ಶ್ರೀಕಾಂತ ಪೂಜಾರಿಯನ್ನ ಎದುರು ನೋಡುತ್ತಿರುವ ಕುಟುಂಬಸ್ಥರಿಗೆ ಹಾಗೂ ಹಿಂದೂ ಕಾರ್ಯಕರ್ತರಿಗೆ ಖುಷಿಯ ಕ್ಷಣಗಳು ಎದುರಾಗಿವೆ. ಈ ನಿಟ್ಟಿನಲ್ಲಿ ಕಾರಾಗೃಹಕ್ಕೆ ಆಗಮಿಸಿದ ಕಾರ್ಯಕರ್ತರು ಸನ್ಮಾನಿಸಿ ಸ್ವಾಗತಿಸಿದರು.
ಇನ್ನೂ ಕಳೆದ 29 ಜೈಲು ಸೇರಿದ್ದ ಶ್ರೀರಾಮ ಜನ್ಮ ಭೂಮಿ ಹೋರಾಟಗಾರನಿಗೆ ನಿನ್ನೆ ಜಾಮೀನು ಸಿಕ್ಕಿತ್ತು. ಜಾಮೀನು ತೀರ್ಪಿನ ಆದೇಶದ ಮೇರೆಗೆ ರಿಲೀಸ್ ಆಗಿದ್ದಾರೆ.