ಬೆಂಗಳೂರು : ವಿಜಯರಾಘವೇಂದ್ರ ಧರ್ಮಪತ್ನಿ ಸ್ಪಂದನಾ ನಿಧನ (Vijayraghavendra’s wife Spandana passes away)ಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ(Former CM HD Kumaraswamy) ಸಂತಾಪ ಸೂಚಿಸಿದ್ದಾರೆ.
ಮಾಧ್ಯಮದೊಂದಿಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿ, ಕನ್ನಡ ಚಿತ್ರರಂಗದ ನಟರಾದ ವಿಜಯರಾಘವೇಂದ್ರ ಧರ್ಮಪತ್ನಿ ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗನಿಧನರಾಗಿರುವುದು ಅಘಾತಕಾರಿ ವಿಚಾರವಾಗಿದೆ. ಚಿಕ್ಕವಯಸ್ಸಿನಲ್ಲೇ ಆರೋಗ್ಯವಾಗಿದ್ದಂತಹ ವಿಜಯರಾಘವೇಂದ್ರ ಧರ್ಮಪತ್ನಿ ಸ್ಪಂದನಾ ಈ ರೀತಿಯಾಗಿ ಸಾವನ್ನಪ್ಪುತ್ತಾರೆ ಎಂಬುವುದನ್ನು ಯಾರು ನಿರೀಕ್ಷೆ ಮಾಡಿಲ್ಲ ಈ ಸಾವಿನ ಸುದ್ದಿ ಕೇಳಿ ಆಫಾತ ಉಂಟಾಗಿದೆ ಎಂದಿದ್ದಾರೆ.
ಚಿತ್ರನಟ ಶ್ರೀ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಶ್ರೀಮತಿ ಸ್ಪಂದನಾ ಅವರು ಅಕಾಲಿಕ ಮರಣಕ್ಕೀಡಾಗಿರುವುದು ನನಗೆ ಅತೀವ ನೋವುಂಟು ಮಾಡಿದೆ. ಚಿಕ್ಕ ವಯಸ್ಸಿನಲ್ಲೇ ಅವರು ಅಗಲಿರುವುದು ಆಘಾತಕಾರಿಯಾಗಿದೆ. ಆ ಭಗವಂತ ಸ್ಪಂದನಾರ ಆತ್ಮಕ್ಕೆ ಚಿರಶಾಂತಿ ನೀಡಲಿ. ಶ್ರೀ ವಿಜಯರಾಘವೇಂದ್ರ, ಮತ್ತವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ. ಓಂ ಶಾಂತಿ ಎಂದು ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಸಾಂತ್ವನ ತಿಳಿಸಿದ್ದಾರೆ.