ಹುಬ್ಬಳ್ಳಿ: ರಾಮ ಭಕ್ತ ಶ್ರೀಕಾಂತ್ ಪೂಜಾರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ನಮ್ಮ ಅರ್ಜಿಯನ್ನು ಮಾನ್ಯ ಮಾಡಿ ಜಾಮೀನು ಮಂಜೂರು ಮಾಡಿದೆ. ಷರತ್ತುಗಳ ಬಗ್ಗೆ ಜಾಮೀನು ಕಾಫಿ ಕೈ ಸೇರಿದ ನಂತರವೇ ಗೊತ್ತಾಗಲಿದೆ ಎಂದು ಶ್ರೀಕಾಂತ್ ಪೂಜಾರಿ ಪರ ವಕೀಲ ಸಂಜಯ ಬಡಸ್ಕರ್ ಹೇಳಿದರು.
ಶ್ರೀಕಾಂತ್ ಪೂಜಾರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಾಮೀನು ಪ್ರತಿಯನ್ನು ತೆಗೆದುಕೊಂಡು ನಾಳೆ ಸಾಯಂಕಾಲದ ಒಳಗೆ ಶ್ರೀಕಾಂತ್ ಪೂಜಾರಿಯವರು ಬಿಡುಗಡೆ ಮಾಡುವ ಭರವಸೆಯಿದೆ ಎಂದರು.
ಶ್ರೀಕಾಂತ್ ಪೂಜಾರಿ ಪರ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿರುವುದು ಸ್ವಾಗತಾರ್ಹವಾಗಿದೆ. ಈ ಕೇಸಿಗೆ ಸಂಬಂಧಿಸಿದ ಎಫ್ ಐ ಆರ್ ಇಲ್ಲ ಕಂಪ್ಲೇಂಟ್ ಇಲ್ಲ ಇದೆಲ್ಲವನ್ನೂ ಕೋರ್ಟ್ ಗಮನಕ್ಕೆ ತಂದಿದ್ದು, ಎಲ್ಲವನ್ನೂ ಪರಿಶೀಲನೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ಅವರು ಹೇಳಿದರು.