ಬೆಂಗಳೂರು : ರಾಜಕೀಯದಲ್ಲಿ ಪಾಪ ಅವರಿಗೆ ಏಳಕ್ಕೆ ಆರು ಸೀಟು ಗೆದ್ದಿದ್ದು ತಡೆದುಕೊಳ್ಳಲು ಆಗ್ತಿಲ್ಲ ಎಂದು ಡಿಸಿಎಂ ಡಿಕೆಶಿವಕುಮಾರ್ (Deputy CM DK Shivakumar) ಹೇಳಿದ್ದಾರೆ.
ಸಚಿವ ಚೆಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ದೂರು ಕೊಟ್ಟಿರುವ ವಿಚಾರವಾಗಿ ಸದಾಶಿವನಗರದಲ್ಲಿ ಮಾತನಾಡಿ ತನಿಖೆ ಮಾಡಿಸೋಣ ಬಿಡಿ, ನಾವು ರಾಜ್ಯ ಪಾಲರಿಗಿ ಕೊಟ್ಟಿದ್ದು ತನಿಖೆ ಆಗಬೇಕಲ್ಲ. ನನ್ನ ವಿರುದ್ದ ಅಶ್ವಥ್ ನಾರಾಯಣ ತನಿಖೆ ಮಾಡಿಸಿ ಅಂತ ಹೇಳಿದ್ರು.ಮುನಿರತ್ನ ವಿರುದ್ಧ ಆರೋಪಗಳನ್ನು ತನಿಖೆ ಮಾಡಿಸಿ ಅಂದಿದ್ರು. ಬಿಬಿಎಂಪಿ ತನಿಖೆ ಮಾಡಿಸ್ತೇವೆ.ರಾಜಕೀಯದಲ್ಲಿ ಪಾಪ ಅವರಿಗೆ ಏಳಕ್ಕೆ ಆರು ಸೀಟು ಗೆದ್ದಿದ್ದು ತಡೆದುಕೊಳ್ಳಲು ಆಗ್ತಿಲ್ಲ.ಜಲಸಿಗೆ ಮೆಡಿಸಿನ್ ಇಲ್ಲ. ಎಲ್ಲವನ್ನೂ ತನಿಖೆ ಮಾಡಿಸೋಣ
ನಾವು ಕೆಂಪಣ್ಣ ಆರೋಪದ ಮೇಲೆ ತಾನೇ ತನಿಖೆ ಮಾಡ್ತಾ ಇರೋದು.ಬಿಬಿಎಂಪಿಯಲ್ಲಿ ಕೆಲಸ ಯಾರು ಕೊಟ್ಟರು ಗೊತ್ತಿಲ್ಲ ಟೆಂಡರ್ ಆಗಿಲ್ಲ ಆದರೂ ಕಾಮಗಾರಿ ಮಾಡಿದ್ದಾರೆ. 25 ದಿನಕ್ಕೆ, 15 ದಿನಕ್ಕೆ ಬಿಲ್ ಆಗಿಬಿಡತ್ತಾ? ಹದಿನೈದೇ ದಿನಕ್ಕೆ ಇಲ್ಲಿ ಕೆಲಸ ಆಗಿಬಿಡತ್ತಾ? ಅದಕ್ಕಾಗಿಯೇ ಪರಿಶೀಲನೆಗೆ ಅಧಿಕಾರಿಗಳನ್ನು ಹಾಕಿದ್ದೇನೆ. ಗುತ್ತಿಗೆದಾರರು ಬಂದಿದ್ರು, ನೈಜತೆಯ ಕೆಲಸಗಳ ಬಗ್ಗೆ ನಮಗೆ ತಕರಾರಿಲ್ಲ. ನಮ್ಮ ಜಲಸಂಪನ್ಮೂಲ ಇಲಾಖೆಯಲ್ಲಿ ದುಡ್ಡು ಇರೋದು 600 ಕೋಟಿ.ಬಿಲ್ ಬಂದಿರೋದು 25 ಸಾವಿರ ಕೋಟಿಗೆ.ನಾವು ಯಾರಿಗೆ ಅಂತ ಹಣ ಬಿಡುಗಡೆ ಮಾಡಲಿ.ಗುತ್ತಿಗೆದಾರರು ನೊಂದಿದ್ದಾರೆ ಪಾಪ.ನಮಗೂ ಜವಾಬ್ದಾರಿ ಇದೆ.ಇದೇ ಅಶ್ವಥ್ ನಾರಾಯಣ ಸದನದಲ್ಲಿ ತನಿಖೆ ಮಾಡಿಸಿ ಅಂತ ಆಗ್ರಹಿಸಿರಲಿಲ್ವಾ. ಅವರ ನುಡಿಮುತ್ತುಗಳನ್ನು ನಾವು ಕೇಳಲೇಬೇಕಲ್ಲ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ