ಬೆಂಗಳೂರು : ಕನ್ನಡದ ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ನಿಧನಕ್ಕೆ ಶಾಸಕ ಅಶ್ವತ್ ನಾರಾಯಣ್ (MLA Ashwath Narayan)ಸಂತಾಪ ಸೂಚಿಸಿದ್ದಾರೆ.
ಮಾಧ್ಯಮದೊಂದಿಗೆ ಶಾಸಕ ಅಶ್ವತ್ ನಾರಯಣ್ ಮಾತನಾಡಿ, ಸ್ಪಂದನ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಈ ಒಂದು ವಿಚಾರ ನಂಬಲು ಸಾಧ್ಯವಾಗ್ತಿಲ್ಲ. ಚಿಕ್ಕ ವಯಸ್ಸಿನಿಂದ ಇಲ್ಲೇ ಆಟವಾಡಿ ಬೆಳೆದಿದ್ದರು.
ಪ್ರವಾಸಕ್ಕೆ ಹೋದಾ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಬರಲಿದೆ ಎನ್ನುವ ಮೂಲಕ ಸಂತಾಪ ಸೂಚಿಸಿದ್ದಾರೆ.