ಬೆಂಗಳೂರು : ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಧರ್ಮಪತ್ನಿ ಸ್ಪಂದನಾ (Actor Vijay Raghavendra’s wife Spandana)ಹೃದಯಾಘಾತಗೊಂಡು ಇಹಲೋಕ ತ್ಯಜಿಸಿದ್ದು, ಸ್ಪಂದನ ಅಂತಿಮ ಸಂಸ್ಕಾರ ಈಡಿಗ ಸಂಪ್ರದಾಯದಂತೆ ನಡೆಯುತ್ತದೆ ಎಂದು ಸಮಾಜ ಪ್ರಣಾವನಂದ್ ಸ್ವಾಮೀಜಿ (Samaja Pranavanand Swamiji)ತಿಳಿಸಿದ್ದಾರೆ.
ಸಮಾಜ ಪ್ರಣಾವನಂದ್ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಧರ್ಮಪತ್ನಿ ಸ್ಪಂದನಾ ಸಾವಿಗೆ ಬ್ರಹ್ಮ ಶ್ರೀನಾರಾಯಣ ಶಕ್ತಿ ಪೀಠದಿಂದ ತೀವ್ರ ಸಂತಾಪ ಸೂಚಿಸಿದೆ. ಈ ಹಿಂದೆ ಸಮೂದಾಯದ ಕಣ್ಮಣಿಯಾದ ಪುನೀತ್ ರಾಜ್‍ಕುಮಾರ್ ನಿಧನವಾಗಿತ್ತು. ಇದೀಗ ಸ್ಪಂದನಾ ಸಾವು ನಮಗೆ ಬಹಳಷ್ಟು ನೋವು ಉಂಟುಮಾಡಿದೆ. ಈಡೀಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ. ಸ್ಪಂದನಾ ತಂದೆ ಜೊತೆನು ಈ ಬಗ್ಗೆ ಚರ್ಚೆ ಮಾಡಲಾಗಿದೆ ಎಂದಿದ್ದಾರೆ.