ಬೆಂಗಳೂರು : ನಟ ವಿಜಯ ರಾಘವೇಂದ್ರ (Actor Vijay Raghavendra) ಧರ್ಮಪತ್ನಿ ಸ್ಪಂದನಾ (Spandana) ಮೃತದೇಹವನ್ನು ಬ್ಯಾಂಕಾಕ್‌ನಿಂದ ಇಂದು ಸಂಜೆ ಬೆಂಗಳೂರಿಗೆ ತರಲಾಗುವುದು ಎಂದಿದ್ದಾರೆ.
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಆಗಸ್ಟ್ 6ರಂದು ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಹೃದಯಾಘಾತ ಸಂಭವಿಸಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆ ದಾಖಲು ಮಾಡಿದ್ದರು. ಚಿಕಿತ್ಸೆ ಸ್ಪಂದಿಸಿದೆ ಸ್ಪಂದನ ಕೊನೆಯುಸಿರೆಳೆದ್ದಾರೆ. ಇದೀಗ ಮರಣೋತ್ತರ ಪರೀಕ್ಷೆಯ ಬಳಿ ಕಾನೂನು ಪ್ರಕ್ರಿಯೆಗಳು ಮಧ್ಯಾಹ್ನದ ಒಳಗೆ ಮುಗಿದರೆ ಮಧ್ಯಾಹ್ನ ಎರಡು ಗಂಟೆಗೆ ಇರುವ ಬ್ಯಾಂಕಾಕ್-ಬೆಂಗಳೂರು ಇಂಡಿಗೋ ಫ್ಲೈಟ್ ಮೂಲಕ ಸ್ಪಂದನಾ ಮೃತದೇಹವನ್ನು ತರಲಾಗುತ್ತದೆ. ಇಂದು ರಾತ್ರಿಯ ಒಳಗೆ ಮೃತದೇಹವನ್ನು ಇಂದು ಬೆಂಗಳೂರಿಗೆ ತರಲಾಗುತ್ತದೆ ಬಳಿಕ ನಾಳೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಸ್ಪಂದನಾ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.
ನಟ ವಿಜಯ ರಾಘವೇಂದ್ರ ಧರ್ಮಪತ್ನಿ ಸ್ಪಂದನಾ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡುವ ಸಾಧ್ಯತೆ , ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಸಂಸ್ಕಾರ ಈಡಿಗ ಸಮುದಾಯದ ಪ್ರಕಾರವೇ ನಡೆಯಲಿದೆ.