ಬೆಂಗಳೂರು : ನಿನ್ನೆಯಷ್ಟೇ ಲೋಕಾಯುಕ್ತ ಅಧಿಕಾರಿಗಳು ಬಿಬಿಎಂಪಿ ಕಂದಾಯ ಅಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿದ್ರು. ಖುದ್ದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಭ್ರಷ್ಟ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ರು. ಲೋಕಾಯುಕ್ತರು ವಾರ್ನ್ ಮಾಡಿ 24 ಗಂಟೆ ಕಳೆದಿಲ್ಲ ಆದಾಗ್ಲೆ ಬಿಬಿಎಂಪಿ ಅಧಿಕಾರಿ ಲಕ್ಷ ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹದೇವಪುರ ವಲಯದ ಆರ್ ಐ ನಟರಾಜ್ ಬಲೆಗೆ ಲೋಕ ಬಲೆಗೆ ಬಿದ್ದಿದ್ದಾರೆ.
ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆರ್ ಐ ನಟರಾಜ್ ಹಾಗೂ ಮಧ್ಯವರ್ತಿ ಪವನ್ ಎಂಬಾತನನ್ನ ಬಂಧಿಸಿದ್ದಾರೆ.
ಮುಕ್ತ ಡೆವಲಪರ್ಸ್ ಗೆ ಖಾತಾ ವಿಚಾರಕ್ಕೆ ಹಣ ಬೇಡಿಕೆ ಇಟ್ಟಿದ್ದ ನಟರಾಜ್ 79 ಫ್ಲಾಟ್ ಗಳಿಗೆ ಖಾತಾ ಮಾಡಿಸಲು ಒಂದೊಂದು ಖಾತೆಗೆ 10 ಸಾವಿರ ಕೊಡುವಂತೆ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ರು.
ಡೀಲ್ ನಂತೆ 7ಲಕ್ಷದ 90ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಇಂದು
60% ಅಂದ್ರೆ ಐದು ಲಕ್ಷ ಹಣ ಅಡ್ವಾನ್ಸ್ ಕೊಡಲು ಹೇಳಿದ್ದ. ಐದು ಲಕ್ಷ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಆರ್ ಐ ಅಂಡ್ ಮಿಡಿಯೇಟರ್ ಲಾಕ್ ಆಗಿದ್ದಾರೆ. ಮಹದೇವಪುರ ಬಿಬಿಎಂಪಿ ಆಫೀಸಿನಲ್ಲೇ ಟ್ರ್ಯಾಪ್ ಆಗಿದ್ದು
ನಟರಾಜ್ ಮತ್ತು ಪವನ್ ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್