ಬೆಂಗಳೂರು : ಬೆಂಗಳೂರಿನ ಎಲ್ಲಾ ಕಾಮಗಾರಿಗಳು ಬಂದ್ ಮಾಡಿ, ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ತಿರುಗಿ ಬಿದ್ದಿದೆ. ಇಂದಿನಿಂದಲೇ ಬೆಂಗಳೂರಿನ ಎಲ್ಲ ಕಾಮಗಾರಿ ಬಂದ್ ಮಾಡುವಂತೆ ಬಾಕಿ ಬಿಲ್ ಪಾವತಿಗೆ ಸಂಘ ಆಗ್ರಹಿಸಿದೆ.
ಬಾಕಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಬಂದ್ ಮಾಡಲು ಗುತ್ತಿಗೆದಾರರ ಸಂಘ ನಿರ್ಧರ ಕೈಗೊಂಡಿದೆ. ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಸಂಘ ಆಗ್ರಹಿಸಿತ್ತು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿ ಅಕ್ರಮಗಳ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ತನಿಖಾ ಸಮಿತಿಗಳನ್ನು ರಚನೆ ಮಾಡಿರುವ ಹಿನ್ನೆಲೆಯಲ್ಲಿ ಬಾಕಿ ಬಿಲ್ ತಡೆಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ಸೋಮವಾರಿಂದಲೇ ಕಾಮಗಾರಿಗಳನ್ನು ನಿಲ್ಲಿಸುವುದಾಗಿ ಗುತ್ತಿಗೆದಾರರ ಸಂಘ ತಿಳಿಸಿದೆ.
ಹಣ ಸ್ಥಗಿತ ಆದಾಗಲೇ 60% ಕಾಮಗಾರಿ ಕೂಡ ಸ್ಥಗಿತ ಆಗಿತ್ತು. ಕೇವಲ 40% ಕಾಮಗಾರಿ ನಡೆಯುತ್ತಿದ್ದವು. ಸರ್ಕಾರದಿಂದ 2,700 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಹಣ ಬಿಡುಗಡೆ ಮಾಡುವವರೆಗೂ ಆ ಕಾಮಗಾರಿಗಳನ್ನು ಸ್ಥಗಿತ ಮಾಡುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ತೀರ್ಮಾನ ಮಾಡಿದೆ.