ಬೆಂಗಳೂರು: ಇಂದಿನಿಂದ ಆಗಸ್ಟ್ 01 ದುನಿಯಾ ದುಬಾರಿ ಆಗಲಿದೆ. ಟೊಮೆಟೊ ದರ ಏರಿಕೆಗೆ ಬೇಸತ್ತ ಜನರಿಗೆ ಮತ್ತೊಂದು ಶಾಕ್ ಸಿಗಲಿದೆ. ಈಗಾಗಲೇ ಕೆಜಿ ಟೊಮೆಟೊ ದರ 140-160 ರೂಪಾಯಿ ಇದ್ದು ಟೊಮೆಟೊ ಖರೀದಿಸಲು ಜನ ಹಿಂಜರಿಯುವಂತಾಗಿದೆ.
ಇದರ ನಡುವೆ ಇದೀಗ ನಂದಿನಿ ಹಾಲಿನ ಮೇಲೆ ಮೂರು ರೂಪಾಯಿ ದರ ಏರಿಕೆಯಾಗ್ತಿದೆ. ಜೊತೆಗೆ ಹೋಟೆಲ್ ಊಟ ತಿಂಡಿ ಕಾಫಿ ಟೀ ಮೇಲೆ ಹತ್ತರಷ್ಟು ದರ ಏರಿಕೆಯಾಗ್ತಿದೆ.
ಇನ್ನೂ ಹೊಸ ಮನೆ ಕಟ್ಟುವವರಿಗೆ ಬೆಲೆ ಏರಿಕೆಯ ಶಾಕ್. ರಾಜ್ಯ ಸರ್ಕಾರದ ಬಜೆಟ್ನಲ್ಲಿ ರಾಜಸ್ವ ಏರಿಕೆ ಹಿನ್ನೆಲೆ ಇಂದಿನಿಂದ ಮರಳು, ಜಲ್ಲಿ, ಗ್ರಾನೈಟ್, ಕಬ್ಬಿಣ ಮತ್ತಷ್ಟು ದುಬಾರಿಯಾಗಲಿದೆ. ಮರಳು, ಎಂ-ಸ್ಯಾಂಡ್, ಜಲ್ಲಿಕಲ್ಲು, ಗ್ರಾನೈಟ್ ಬಂಡೆ, ಕಬ್ಬಿಣ ಮನೆ ನಿರ್ಮಾಣದ ಇನ್ನಿತರ ವಸ್ತುಗಳ ಪರಿಷ್ಕೃತ ದರ ಜಾರಿಯಾಗಿದ್ದು ಇಂದಿನಿಂದ ಮನೆ ನಿರ್ಮಾಣದ ವಸ್ತುಗಳು ದುಬಾರಿಯಾಗಲಿವೆ. ಜೊತೆಗೆ ಮನೆ ನಿರ್ಮಾಣದ ವಸ್ತುಗಳ ಸಾಗಾಣಿಕೆ ದರ ಕೂಡ ದುಬಾರಿಯಾಗಲಿದೆ.