ಬೆಂಗಳೂರು : ಸರ್ಕಾರದ ವಿರುದ್ಧ ಸಿಂಗಾಪೂರದಲ್ಲಿ ಷಡ್ಯಂತ್ರ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟಿದ್ದಾರೆ.
ಮಾಜಿ ಸಿಎಂ, ಜೆಡಿಎಸ್(JDS) ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತ ಯುರೋಪ್ ಪ್ರವಾಸ ಮುಗಿಸಿ ತಡರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುರೋಪ್ ಪ್ರವಾಸಕ್ಕೆ ತೆರಳಿದ್ದನ್ನು ಸಿಂಗಾಪುರಕ್ಕೆ ಹೋಗಿದ್ದೆ. ಅಲ್ಲಿ ಸರ್ಕಾರ ಕೆಡವಲು ಷಡ್ಯಂತ್ರ ನಡೆಸಿದ್ದೆ ಎಂದು ಹೇಳುತ್ತಾರೆ. ನಾನು ಕುಟುಂಬದವರೊಂದಿಗೆ ಯುರೋಪ್ ಪ್ರವಾಸಕ್ಕೆ ಹೋಗಿದ್ದೆ. ಅವರಿಗೆ ನನ್ನ ಬಗ್ಗೆ ಇನ್ನೂ ಭಯ, ಆತಂಕವಿದೆ ಎಂಬುದನ್ನು ಕಾಣಬಹುದು. ಅವರು ಕುತಂತ್ರ ಮಾಡುತ್ತಾರೆ. ಕೃತಕವಾದ ಶಕ್ತಿ ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಅದು ಬಹಳ ದಿನ ಇರುವುದಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಗುತ್ತಿಗೆದಾರರಿಗೆ ದುಡ್ಡು ಇದ್ದರೆ ಒಳಗೆ ಬನ್ನಿ ಎನ್ನುತ್ತಾರೆ. ಇವರಿಂದ ಪಾರದರ್ಶಕ ಆಡಳಿತ ಸಾಧ್ಯವೇ? ಭ್ರಷ್ಟಾಚಾರ ನಿಲ್ಲಿಸಿ ಪಾರದರ್ಶಕ ಆಡಳಿತ ನೀಡುತ್ತಾರೆಯೇ? ಈಸ್ಟ್ ಇಂಡಿಯಾ ಕಂಪನಿ ಭಾರತ ಬಿಟ್ಟು ಹೋಗಿದೆ. ಬ್ರಿಟಿಷರ ವಸೂಲಿ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.