ಬೆಂಗಳೂರು : ಕುಮಾರಸ್ವಾಮಿ ಅವರು ಆಧಾರಗಳಿಲ್ಲದೆ ಆರೋಪ ಮಾಡುತ್ತಾರೆ ಎಂದು ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah)ತಿರಗೇಟು ನೀಡಿದ್ದಾರೆ.
ಈ ಸರ್ಕಾರದಲ್ಲಿ ವೈಎಸ್‌ಟಿ ತೆರೆಗೆ ಇದೆ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿದ ಅವರು ಕುಮಾರಸ್ವಾಮಿ is always hit run case. ಕುಮಾರಸ್ವಾಮಿ know as always hit and run case. ಪೆನ್ ಡ್ರೈವ್ ತೋರಿಸಿದ್ರಲ್ವ ಏನಾಯ್ತು. ಏನಾದ್ರು ಇದ್ದರೆ ತಾನೇ ಬಿಡೋದು. YST ಟ್ಯಾಕ್ಸ್ ಅಂದ್ರೇನು ಎಂದು ಹೇಳಿದರು. ಇನ್ನೂ ಪ್ರಧಾನಿ ಮೋದಿ ಭೇಟಿ ಪ್ರತಿಕ್ರಿಯಿಸಿ ಪ್ರಧಾನಮಂತ್ರಿಗಳ ಭೇಟಿ ಉಭಯ ಕುಶಲೋಪರಿ ಅಷ್ಟೇ.ನೀವು ಚೆನ್ನಾಗಿದ್ದೀರಾ, ನಾವು ಚೆನ್ನಾಗಿದ್ದೀರ ಅಷ್ಟೇ ಬೇರೆ ಏನಿಲ್ಲ.ಅವರ ಜೊತೆ ಏನು ಮಾತುಕತೆ ಮಾಡಿಲ್ಲ.ಮೊದಲ ಬಾರಿ ಭೇಟಿ ಮಾಡ್ತಿರೋದ್ರಿಂದ ಕುಶೋಲಪರಿ ಮಾತುಕತೆ ಅಷ್ಟೇ.ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆ ನಾವು ಮಾತನಾಡಿದ್ದೇವೆ.
ಪಿಯೂಶ್ ಗೋಯಲ್ ಜೊತೆಗೂ ಮಾತುಕತೆ ಆಗಿತ್ತು.ಅವರು ಕೊಡೋಕೆ ಆಗಲ್ಲ ಅಂತ ಹೇಳಿದ್ದಾರೆ. ಅಕ್ಕಿ ವಿಚಾರದಲ್ಲಿ ಅವರು ರಾಜಕೀಯ ಮಾಡ್ತಿದ್ದಾರೆ.ರಾಜನಾಥ್ ಸಿಂಗ್ ಭೇಟಿ ಮಾಡಿ ಒಂದು ಏರ್ ಶೋ ಮಾಡಲಿಕ್ಕೆ ಹಿಂದೆ ಕೊಟ್ಟಿದ್ದರು. ಈ ಸಾರಿ ಮತ್ತೆ ಅವಕಾಶ ಕೊಡಿ ಅಂತ ಹೇಳಿದ್ದೇವೆ.
ವರದಿ : ಬಸವರಾಜ ಹೂಗಾರ