ಬೆಂಗಳೂರು : ರಾಜ್ಯಾದ್ಯಂತ ಆಗಸ್ಟ್ 1ರಿಂದಲೇ (ನಾಳೆ) ಹಾಲಿನ ಪರಿಷ್ಕೃತ ದರ 3 ರೂಪಾಯಿ ಏರಿಕೆಯಾಗಲಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ತರಕಾರಿ ದರ ಏರಿಕೆ ಬೆನ್ನಲ್ಲೆ ಹಾಲಿನ ದರ ಏರಿಕೆ ಬಿಸಿ ತಟ್ಟಲಿದೆ. ಯಾವೆಲ್ಲ ಮಾದರಿಯ ಹಾಲಿಗೆ ಎಷ್ಟೆಲ್ಲ ಹಣ ಫಿಕ್ಸ್ ಆಗಲಿದೆ ಅನ್ನೋದರ ಕುರಿತ ಮಾಹಿತಿ ಇಲ್ಲಿದೆ..
ಕಳೆದ ವಾರದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಿ, ನಂದಿನಿ ಹಾಲು ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗುವ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಹಿಂದೇ ಹಾಲಿನ ದರವನ್ನು 5.ರೂಪಾಯಿ ಏರಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿತ್ತು.
ಈ ವಿಚಾರವಾಗಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಮುಂದಿನ ಆಗಸ್ಟ್ 1ರಿಂದಲೇ ಹಾಲಿನ ದರವನ್ನು 3 ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಾಳೆಯಿಂದಲೇ ರಾಜ್ಯಾದ್ಯಂತ ಎಲ್ಲಾ ಮಾದರಿಯ ಹಾಲಿಗೂ 3 ರೂ ದರ ಏರಿಕೆಯಾಗಲಿದ್ದು, ಇದರಿಂದ ಹೈನುಗಾರಿಕೆಯನ್ನು ನೆಚ್ಚಿಕೊಂಡ ರೈತರಿಗೂ ಅನುಕೂಲವಾಗಲಿದೆ.
ರೈತರು ಖರೀದಿ ಮಾಡುವ ದರವೂ ಹೆಚ್ಚಳವಾಗಲಿದೆ ಹಾಗಿದ್ರೆ ಆಗಸ್ಟ್ 1ರಿಂದ ಜಾರಿಯಾಗಲಿರೋ ದರವೆಷ್ಟು ಅನ್ನೋದರ ಕುರಿತ ಮಾಹಿತಿ ಇಲ್ಲಿದೆ ಓದಿ…
- ಅರ್ಧ ಲೀಟರ್ ನಂದಿನಿ ಟೋನ್ಡ್ ಹಾಲಿಗೆ 23 ಹಾಗೂ 1 ಲೀ.ಗೆ 43 ರೂ. ಫಿಕ್ಸ್
- ಡಬಲ್ ಟೋನ್ಡ್ ನಂದಿನಿ ಹಾಲು ಅರ್ಧ ಲೀ.ಗೆ 22 ಹಾಗೂ 1ಲೀ.ಗೆ 41 ರೂ.ಫಿಕ್ಸ್
- ಶುಭಂ ಅರ್ಧ ಲೀಟರ್ ನಂದಿನಿ ಹಾಲಿಗೆ 26 ಹಾಗೂ 1ಲೀ.ಗೆ 48 ರೂ. ಫಿಕ್ಸ್
- ಸ್ಪೆಷಲ್ ಅರ್ಧ ಲೀಟರ್ ನಂದಿನಿ ಹಾಲಿಗೆ 26 ಮತ್ತು 1 ಲೀ.ಗೆ 48 ರೂ. ಫಿಕ್ಸ್
- ಸಮೃದ್ಧಿ ಅರ್ಧ ಲೀ. ಹಾಲಿಗೆ 27 ಹಾಗೂ 1 ಲೀ.ಗೆ 51 ರೂ.ಗೆ ಬದಲಾವಣೆ
- ನಂದಿನಿ ಹಸುವಿನ ಹಾಲು ಅರ್ಧ ಲೀಟರ್‌ಗೆ 25 ಹಾಗೂ 1 ಲೀಟರ್‌ಗೆ 54 ರೂಪಾಯಿ ಫಿಕ್ಸ್ ಆಗಲಿದೆ ಎಂದು ವರದಿಯಾಗಿದೆ.