ಬೆಂಗಳೂರು : 11 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ರಾಜ್ಯ ಸರ್ಕಾರ ತಡೆ ನೀಡಿದೆ. ರಾಜ್ಯಾದ್ಯಂತ ಮಂಗಳವಾರ 211 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇಂದು ಬೆಳಗ್ಗೆ ಸರ್ಕಾರದಿಂದ ದಿಢೀರ್ ತಡೆ ಹಿಡಿಯಲಾಗಿದೆ.
ರವಿ ಗೌಡ ಬಿ (ಯಶವಂತಪುರ ಟ್ರಾಫಿಕ್ ಸಂಚಾರ), ಧನಂಜಯ್ (ಯಶವಂತಪುರ ಲಾ ಅಂಡ್ ಆರ್ಡರ್), ಲಕ್ಷ್ಮಣ್ ಜೆ (ನಂದಿನಿ ಲೇಔಟ್ ಪೊಲೀಸ್), ಅಶ್ವಥ್ ಗೌಡ (ಜ್ಞಾನಭಾರತಿ ಪೊಲೀಸ್ ಠಾಣೆ), ಗೋವಿಂದರಾಜು (ಪೀಣ್ಯ ಪೊಲೀಸ್ ಠಾಣೆ), ಕೃಷ್ಣಕುಮಾರ್ (ಬೇಗೂರು ಪೊಲೀಸ್ ಠಾಣೆ), ಜಗದೀಶ್ (ಕೆಎಸ್ ಲೇಔಟ್ ಠಾಣೆ), ವಜ್ರಮುನಿ (ಕೆಆರ್ ಮಾರ್ಕೆಟ್), ರವಿಕುಮಾರ್ (ಪುಟ್ಟೇನಹಳ್ಳಿ), ಅನಿಲ್‌ಕುಮಾರ್ (ಮಲ್ಲೇಶ್ವರಂ), ಎಡ್ವಿನ್ ಪ್ರದೀಪ್ (ಜಿಗಣಿ) ಅವರ ವರ್ಗಾವಣೆ ಆದೇಶವನ್ನು ತಡೆಹಿಡಿಯುವಂತೆ DG IGP ಕಚೇರಿಯಿಂದ ಆದೇಶ ನೀಡಲಾಗಿದೆ.