ಬೆಂಗಳೂರು : ರಾಜ್ಯದಲ್ಲಿ ಹೊಸ ಸರ್ಕಾರ ಜಾರಿಯಾದ ಮೇಲೆ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಿರುವ ವಿಚಾರ. ಇದಕ್ಕೆ ಸಾಕ್ಷಿಯೆಂಬಂತೆ ನಿನ್ನೆ ವರ್ಗಾವಣೆಗೊಂಡ ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ತಡೆ ಭಾಗ್ಯ ಬಂದಿದೆ.
ಎಚ್ ಡಿ ಕುಮಾರಸ್ವಾಮಿ ಟ್ರಾನ್ಸ್ ಫರ್ ದಂಧೆ ಆರೋಪಕ್ಕೆ ಅಸ್ತ್ರ ಕೊಡ್ತಾ ಸರ್ಕಾರ ಅನ್ನೋದು ಇಲ್ಲಿ ಗಮನಿಸಬೇಕಾದ ಅಂಶ.
ನಿನ್ನೆ ರಾಜ್ಯಾದ್ಯಂತ 211 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿತ್ತು. ವರ್ಗಾವಣೆ ಆದೇಶ ಬರ್ತಿದ್ದಂತೆ ಹಲವು ಇನ್ಸ್ ಪೆಕ್ಟರ್ ಗಳಿಗೆ ತಡೆ ಭಾಗ್ಯ ಸಿಕ್ಕಿದೆ.
ಸರ್ಕಾರ ಆದೇಶ ಮಾಡೋದೇಕೆ ಮತ್ತೆ ತಡೆ ಒಡ್ಡೋದ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಹುಡುಕಿದ್ರೆ ಇಲ್ಲಿ ಸಿಗೋ ಉತ್ತರ
ಸ್ವಕ್ಷೇತ್ರದ ನಿರ್ವಹಣೆಗೆ ಸಚುವರು ಪೈಪೋಟಿಗಿಳಿದ್ದಂತೆ ಕಾಣ್ತಿರೋದು. ಎಂಪಿ ಲೆಟ್ರು ಕೊಟ್ರು ಸರ್ಕಾರದಲ್ಲಿ ಬೆಲೆಯಿಲ್ಲದಂತಾಗಿದೆಯಂತೆ. ಇದೇ ರೀತಿ ಕೆಲ ಸಚಿವರು ಹಾಗೂ ಶಾಸಕು ತಮಗೆ ಬೇಕಾದ ಇನ್ಸ್ಪೆಕ್ಟರ್ ಗಳಿಗೆ ಲೆಟ್ರು ಕೊಟ್ರು ಸರ್ಕಾರ ಅದನ್ನ ಪರಿಗಣಿಸಿಲ್ಲ. ಹಾಗಾಗಿ ಬೇಗುದಿಗೆ ಬಿದ್ದ ನಾಯಕರ ಭಾಗ್ಯಗಳ ಸರ್ಕಾರದಲ್ಲಿ ವರ್ಗಾವಣೆಯಾದ ಇನ್ಸ್ ಪೆಕ್ಟರ್ ಗಳಿಗೆ ತಡೆ ಭಾಗ್ಯ ತಂದಿದ್ದಾರೆ ಎಂದು ಹೇಳಲಾಗ್ತಿದೆ.
ಬೆಂಗಳೂರು ಗ್ರಾಮಾಂತರ ಲೋಕಾಸಭಾ ಕ್ಷೇತ್ರದ ಹಲವು ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ಭಾಗ್ಯ ಸಿಕ್ಕಿದ್ದು, ಇದಲ್ಲದೆ ಹಲವು ಕಡೆ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ಬೆಳ್ಳಂ ಬೆಳಗ್ಗೆ ತಡೆ ಸಿಕ್ಕಿದೆ.
ಸದ್ಯ ತಡೆಯಾಗಿರೋ ಇನ್ಸ್ಪೆಕ್ಟರ್ ಲಿಸ್ಟ್
ರವಿ ಗೌಡ ಬಿ- ಯಶವಂತಪುರ ಟ್ರಾಫಿಕ್ ಸಂಚಾರ
ಯಶತಪುರ ಲಾ ಅಂಡ್ ಆರ್ಡರ್ – ಧನಂಜಯ್
ಲಕ್ಷ್ಮಣ್ ಜೆ – ನಂದಿನಿ ಲೇಔಟ್ ಪೊಲೀಸ್
ಅಶತ್ಥ ಗೌಡ- ಜಾನ್ಞಭಾರತಿ ಪೊಲೀಸ್ ಠಾಣೆ
ಗೋವಿಂದರಾಜು – ಪಿಣ್ಯ ಪೊಲೀಸ್ ಠಾಣೆ
ಕೃಷ್ಣಕುಮಾರ್- ಬೇಗೂರು ಪೊಲೀಸ್ ಠಾಣೆ
ಜಗದೀಶ್ – ಕೆ ಎಸ್ ಲೇಔಟ್ ಠಾಣೆ
ವಜ್ರಮುನಿ – ಕೆ ಆರ್ ಮಾರ್ಕೆಟ್
ರವಿಕುಮಾರ್ – ಪುಟ್ಟೇನಹಳ್ಳಿ
ಅನಿಲ್‌ಕುಮಾರ್ – ಮಲ್ಲೇಶ್ವರಂ
ಜಿಗಣಿ – ಎಡ್ವಿನ್ ಪ್ರದೀಪ್
ಮೇಲಿನ ಇನ್ಸ್ಪೆಕ್ಟರ್ ಗಳಿಗೆ DGIGP ಕಚೇರಿಯಿಂದ ತಡೆ ಭಾಗ್ಯದ ಆದೇಶ ಸಿಕ್ಕಿದೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್