ಬೆಂಗಳೂರು : ಸಿಲಿಕಾನ್ ಸಿಟಿ ಮತ್ತೊಮ್ಮ ಹುಸಿ ಬಾಂಬ್ ಮೇಲ್ ಕರೆಗೆ ಬೆಚ್ಚಿಬಿದ್ದಿದೆ. ಇಷ್ಟು ದಿನ ಶಾಲೆಗಳನ್ನ ಟಾರ್ಗೇಟ್ ಮಾಡ್ತಿದ್ದ ಕಿಡಿಗೇಡಿಗಳು ಈ ಬಾರಿ ಬೆಂಗಳೂರಿನ ಹಿರಿಮೆ ವಿಶ್ವೇಶ್ವರಯ್ಯ ಮ್ಯೂಸಿಯಂ ನ ಟಾರ್ಗೇಟ್ ಮಾಡಿದ್ದಾರೆ.
ಮ್ಯೂಸಿಯಮ್ ಗೆ ಬಾಂಬ್ ಇಟ್ಟಿರೋದಾಗಿ ಮೇಲ್ ಮಾಡಿದ್ದು, ಬೆಳಗ್ಗೆ ಮ್ಯೂಸಿಯಂ ಓಪನ್ ಆಗ್ತಿದ್ತಂತಡ ಸ್ಫೋಟಗೊಳ್ಳಲಿದೆ ಅಂತಾ ಇ ಮೇಲ್ ಕಳುಹಿಸಿದ್ದಾರೆ.
ಹಲವು ಬಾಂಬ್ ಗಳನ್ನ ಇಡಲಾಗಿದ್ದು ಸ್ಫೋಟವಾಗಲಿದೆ ಅಂತಾ ಬೆದರಿಕೆ ಮೇಲ್ ಬಂದಿದೆ.
ಕೂಡಲೇ ಶ್ವಾನದಳ ಮತ್ತು ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಿದ್ದು, ಮ್ಯೂಸಿಯಂ ಪೂರ್ತಿ ತಡಕಾಡಿದ ಬಳಿಕ ಹುಸಿ ಮೇಲ್ ಅನ್ನೋದು ಕನ್ಫರ್ಮ್ ಆಗಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಡೈರೆಕ್ಟರ್ ಇಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.