ಬೆಂಗಳೂರು: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬಗ್ಗೆ ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ. ಬಿಬಿಎಂಪಿ (BBMP) ನಡೆಸಿರುವ ಸರ್ವೆಯಲ್ಲಿ ಇಂಟ್ರೆಸ್ಟಿಂಗ್ ವಿಚಾರ ಬಯಲಾಗಿದೆ.
ಬೆಂಗಳೂರಿನ 8 ವಲಯಗಳಲ್ಲೂ ಕುಡಿಯಲು ನೀರು ಯೋಗ್ಯವಲ್ಲ. ಬಿಬಿಎಂಪಿ(BBMP) ನಡೆಸಿರೋ ಸರ್ವೆಯಲ್ಲಿ ಯಾವ್ಯಾವ ಏರಿಯಾ ನೀರು ಕಲುಷಿತ ಎಂಬುದರ ಕಂಪ್ಲೀಟ್ ವರದಿ ಇಲ್ಲಿದೆ.
ಮುಂಗಾರು ಅವಧಿಯಲ್ಲಿ ನೀರು ಕಲುಷಿತಗೊಳ್ಳೋದು ಸಾಮಾನ್ಯ. ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲೂ ಅತಿಸಾರ ಪ್ರಕರಣಗಳು ಜಾಸ್ತಿ ಆಗ್ತಿವೆ.
ಬಿಬಿಎಂಪಿ (BBMP) ಕೆಲ ಏರಿಯಾಗಳ ನೀರಿನ ಮಾದರಿಗಳನ್ನ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದರು. ಆ ಪರೀಕ್ಷೆಯಲ್ಲಿ ಕುಡಿಯಲು ಯೋಗ್ಯವಲ್ಲದ ಮಾದರಿಗಳು ಇರೋದು ಪತ್ತೆಯಾಗಿದೆ. 692 ಸ್ಯಾಂಪಲ್‍ಗಳನ್ನ ಸಂಗ್ರಹ ಮಾಡಲಾಗಿತ್ತು. ಅದರಲ್ಲಿ 59 ಎನ್‍ಎಸ್‍ಎಸ್‍ಪಿಪಿ(NSSP) ಅಂತಾ ಗುರುತು ಮಾಡಲಾಗಿದೆ.
ಈ ಕೆಳಗಿನ ಏರಿಯಾಗಳಲ್ಲಿ ಕುಡಿಯುಲು ನೀರು ಯೋಗ್ಯವಲ್ಲ:
ಬಿಟಿಎಂ ಲೇಔಟ್, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಪದ್ಮನಾಭನಗರ, ವಿಜಯನಗರ, ಸಿವಿ ರಾಮನ್‍ನಗರ, ಹೆಬ್ಬಾಳ, ಪುಲಕೇಶಿನಗರ, ಚಾಮರಾಜಪೇಟೆ, ಗಾಂಧಿನಗರ, ಮಹಾಲಕ್ಷ್ಮೀಪುರ, ಮಲ್ಲೇಶ್ವರಂ ಹಾಗೂ ರಾಜಾಜಿನಗರದ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಬಯಲಾಗಿದೆ.
ನೀರನ್ನು ಕ್ಲೋರಿನೇಟ್ ಮಾಡಿ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ವರದಿ ಏನು ಬರುತ್ತೋ ಎಂಬ ಕುತೂಹಲ ಇದೆ. ಆದರೆ ಜನ ನೀರು ಸೇವನೆಯಲ್ಲಿ ಮುನ್ನೆಚ್ಚರಿಕಾ ವಹಿಸಬೇಕು ಎಂದು ಬಿಬಿಎಂಪಿ(BBMP) ಹೇಳಿದೆ.