ಬೆಂಗಳೂರು : ಸಿಲಿಕಾನ್ ಸಿಟಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಊಟ ಮಾಡಲು ಬಂದವರ ಮೇಲೆ ಸಿಂಟೆಕ್ಸ್ ಟ್ಯಾಂಗ್ ಬಿದ್ದು ಸ್ಥಳದಲ್ಲೇ ಒಬ್ಬರು ಮೃತ ಪಟ್ಟರೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ಸುಮಾರು 10.30 ರ ಸಮಯ ಶಿವಾಜಿನಗರದ ಬಸ್ ಸ್ಟಾಪ್ ಬಳಿಯಿರುವ ಕಾಕ್ ಟೌನ್ ಫರ್ನಿಚರ್ ಸಮೀಪ
ದಾಸ್ ಎನ್ನೋ ವ್ಯಕ್ತಿ ಕಳೆದ ಮೂರು ತಿಂಗಳಿನಿಂದ ಪುಟ್ ಪಾಥ್ ಮೇಲೆ ಎಗ್ ರೈಸ್ ವ್ಯಾಪಾರ ಮಾಡುತ್ತಿದ್ದ ತಳ್ಳೊ ಗಾಡಿಯಲ್ಲಿ ಎಗ್ ರೈಸ್ ಜೊತೆ ಗೆ ಗೋಬಿಮಂಚೂರಿ, ನೂಡಲ್ಸ್ ಮಾರಾಟ ಮಾಡುತ್ತಿದ್ದ. ಎಂದಿನಂತೆ ನಿನ್ನೆ ಕೂಡ ವ್ಯಾಪಾರ ಮಾಡುತ್ತಿದ್ದ ಊಟಕ್ಕೆಂದು ಆಂದ್ರ ಮೂಲದ ನಾಗೇಶ್ವರ ರಾವ್, ತಮಿಳುನಾಡಿನ ಅರುಳ್ ಹಾಗೂ ಕಮಲ್ ಥಾಪ ಕೂಡ ಊಟಕ್ಮೆ ಬಂದಿದ್ದಾರೆ .ಇನ್ನೇನು ಊಟ ಮಾಡಬೇಕು ಅನ್ನೋ ಅಷ್ಟರಲ್ಲಿ ಫರ್ನಿಚರ್ ಕಟ್ಟಡದ ಮೇಲೆಯಿಟ್ಟಿದ್ದ 500 ಲೀಟರ್ ನ ಸಿಂಟೆಕ್ಸ್ ವಾಟರ್ ಟ್ಯಾಂಕ್ ಕಾಂಪೌಂಡ್ ಸಮೇತ ಕುಸಿದು ಬಿದಿದ್ದೆ ಘಟನೆಯಲ್ಲಿ ಅರುಳ್ ಸ್ಥಳದಲ್ಲೆ ಸಾವನ್ನಿಪ್ಪಿದ್ರೆ ನಾಗೇಶ್ವರ ರಾವ್ ,ಹಾಗೂ ಕಮಲ್ ಥಾಪ ಆಸ್ಪತ್ರೆಯ ಲ್ಲಿ ಮೃತ ಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಕಮಲ್ ಥಾಪನನ್ನ ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಗೆ ಶೀಪ್ಟ್ ಮಾಡಲಾಗಿತ್ತು ಆದ್ರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ. ಇನ್ನೂ ಐದು ಹಂತಸ್ಥಿನ ಈ ಕಟ್ಟಡ ಮೊದಲ ಮೂರು ಪ್ಲೋರ್ ಗೆ ಮಾತ್ರ ಬಿಬಿಎಂಪಿ ಯಿಂದ ಅನುಮತಿ ಸಿಕ್ಕಿದೆ ಅಂತೆ .ಆದ್ರೆ ಉಳಿದ ನಾಲ್ಕನೇ ,ಐದನೆ ಪ್ಲೋರ್ ಮೇಲೆ ಸರಿಯಾಗಿ ನಿರ್ಮಾಣ ಮಾಡಿದ್ದು ಟ್ಯಾಂಕ್ ಇಡಲು ಸರಿಯಾದ ಸೇಪ್ಟಿ ಮಾಡದೆ ,ಗೋಡೆಯ ನ್ನು ಕೂಡ ಕಟ್ಟಿಲ್ಲವಂತೆ, ನೀರಿನ ಟ್ಯಾಂಕ್ ಗೆ ತಕ್ಮ ಸಾಮಾರ್ಥ್ಯ ತಡೆದುಕೊಳ್ಳದೆ ಗೊಡೆ ಸಮೇತ ಕುಸಿದು ಬಿದ್ದಿದ್ದೆ. ಇನ್ನೂ ಘಟನೆ ಬಗ್ಗೆ ಶಿವಾಜಿನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಮಾಲೀಕರನ್ನು ಕೂಡ ಕರೆಸಿ ವಿಚಾರಣೆ ಮಾಡಲಾಗುತ್ತಿದ್ದು ಬಿಬಿಎಂಪಿ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸಿದ್ದಾರೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್