ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದು, ಇದೀಗ ಮತ್ತೆ ಟೊಮೆಟೋ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು ಟೊಮೆಟೋ ಕೊಂಡುಕೊಳ್ಳಲು ಜನರು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದಲ್ಲಿ ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಅವಧಿಗಳಲ್ಲಿ ಟೊಮೆಟೊಗಳ ಉತ್ಪಾದನೆಯು ಕಡಿಮೆಯಾಗುತ್ತದೆ. ಸ್ವಲ್ಪ ಬೆಳೆಗೂ ಹಲವು ರೋಗಗಳು ಬಾಧಿಸಿದ್ದವು. ಇನ್ನೊಂದೆಡೆ ಮುಂಗಾರೂ ತೀರಾ ತಡವಾಗಿ ಆಗಮಿಸಿತು ಅಷ್ಟೇ ಅಲ್ಲದೇ ಬಾರಿ ಬಿರು ಬಿಸಿಲಿನಿಂದಾಗಿ ಬೇಸಿಗೆಯಲ್ಲೇ ಉತ್ಪಾದನೆ ಕಡಿಮೆಯಾಗಿರೋದ್ರಿಂದ ಬೆಲೆ ಏರಿಕೆಯಾಗಿದೆ. ಇದರಿಂದ ಜನ ಸಾಮಾನ್ಯರು ದುಬಾರಿ ಹಣವನ್ನು ಕೊಟ್ಟು ಟೊಮೆಟೋಗಳನ್ನು ಖರೀದಿಸಬೇಕಾಗಿದೆ.
ಕಳೆದ ಒಂದು ವಾರದ ಹಿಂದೆ ಕೆಜಿಗೆ 70-80 ರೂ.ಗೆ ಇದ್ದ ಟೊಮೆಟೋ ಪೂರೈಕೆ ಕಡಿಮೆ ಆಗಿರುವ ಹಿನ್ನಲ್ಲೆ ಇದೀಗ ಮತ್ತೆ ಗಗನಕುಸುಮವಾಗಿದೆ. ನಾಟಿ ಟೊಮೆಟೋ ಕೆಜಿಗೆ 140 ರಿಂದ 150 ರೂ.ಗೆ ಹಾಗೂ ಫಾರ್ಮ್ ಟೊಮೆಟೋ 120 ರಿಂದ 130 ರೂ.ಗೆ ಏರಿಕೆ ಕಂಡಿದೆ.