ಬೆಂಗಳೂರು : ಖಾಸಗಿ ಚಾಲಕರ ಬಂದ್ ವಾಪಾಸ್ ಪಡೆದ ಬೆನ್ನಲ್ಲೆ ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ 2ನೇ ಸುತ್ತಿನ ಸಭೆ ನಡೆಯಲಿದೆ .
ಶಕ್ತಿ ಯೋಜನೆಯಿಂದ ಉಂಟಾಗಿರುವ ಆರ್ಥಿಕ ಹೊಡೆತದಿಂದ ಕಂಗೆಟ್ಟಿರುವ ಖಾಸಗಿ ಸಾರಿಗೆ ಸಂಘಟನೆಗಳು ಮುಷ್ಕರ ಎಚ್ಚರಿಕೆ ನೀಡಿದ್ದಾರೆ ಈ ಬೆನ್ನಲ್ಲೆ ಶಾಂತಿನಗರದ ರಾಜ್ಯ ಸಾರಿಗೆ ಇಲಾಖೆಯ ಮುಖ್ಯ ಕಚೇರಿಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಇಂದು 11 ಗಂಟೆಗೆ ಸಭೆ ಆರಂಭವಾಗಲಿದೆ.
ಇಂದು 11 ರಿಂದ 12 ಗಂಟೆಯವರೆಗೆ ಆಟೋ ಅಸೋಸಿಯೇಷನ್, 12 ರಿಂದ 1 ಗಂಟೆಯವರೆಗೆ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಹಾಗೂ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಖಾಸಗಿ ಬಸ್ ಅಸೋಸಿಯೇಷನ್ ಜೊತೆಗೆ ಸಭೆ ನಡೆಯಲಿದೆ.